spot_imgspot_img
spot_img

ಮಂಗಳೂರು ಧರ್ಮಪ್ರಾಂತ್ಯದ ಮೆಗಾ ಬೈಬಲ್ ಸಮ್ಮೇಳನ ಸಮಾರೋಪ

ಮಂಗಳೂರು ಧರ್ಮಪ್ರಾಂತ್ಯದ ಸೇವಾ ಕಮ್ಯುನಿಯನ್ (MDSC) ಮತ್ತು ಬೈಬಲ್ ಆಯೋಗವು ಮಂಗಳೂರಿನ ಕಾರ್ಡೆಲ್ ಹೋಲಿ ಕ್ರಾಸ್ ಚರ್ಚ್‌ ಮೈದಾನದಲ್ಲಿ ಆಯೋಜಿಸಿದ ನಾಲ್ಕು ದಿನದ ಮೆಗಾ ಬೈಬಲ್ ಸಮಾವೇಶವು ಫೆಬ್ರವರಿ 25, 2024 ರಂದು ತೆರೆಕಂಡಿತು. ಸರಿಸುಮಾರು 10,000 ಭಕ್ತಾದಿಗಳು ಅವರ ಕುಟುಂಬಗಳೊಂದಿಗೆ ಹಾಜರಿದ್ದು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸಾಮುದಾಯಿಕ ನವೀಕರಣಕ್ಕೆ ಸಾಕ್ಷಿಯಾದರು.

BE14

BE15

BE16

BE17

BE18

ಕೇರಳದ ಡಿವೈನ್ ರಿಟ್ರೀಟ್ ಸೆಂಟರ್‌ನಿಂದ ರೆ.ಫಾ. ಜೋಸೆಫ್ ಎಡಟ್ಟು ವಿ.ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಈ ಸಮಾವೇಶನದಲ್ಲಿ ದೇವರ ಸ್ತುತಿ ಸ್ತೋತ್ರ, ವಿಮೋಚನೆಯ ಪ್ರಾರ್ಥನೆಗಳು, ಸಾಮೂಹಿಕ ಪೂಜೆ- ಆರಾಧನೆ ಗಳಿಂದ ಕೂಡಿದ್ದು ಉಅಶಸ್ವಿಯಾಗಿ ಕೊನೆಗೊಂಡಿತು.

MDSCಯ ಸಂಯೋಜಕರಾದ ಕೆವನ್ ಡಿಸೋಜಾ ಅವರ ನೇತೃತ್ವದ ಸ್ತುತಿ-ಸ್ತೋತ್ರ ಮತ್ತು ಆರಾಧನಾ ಅಧಿವೇಶನದೊಂದಿಗೆ ದಿನವು ಪ್ರಾರಂಭವಾಯಿತು. ರೋನಿ ಡಿಸೋಜಾ ಮತ್ತು ಸಂಗಡಿಗರು ಸುಮಧುರ ಕಂಠದಿಂದ ದೇವರನ್ನು ಸ್ತುತಿಸಿದರು.

BE03

BE04

BE01

BE02

ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಮಹಾ ಬಲಿಪೂಜೆಯ ಅರ್ಪಿಸಿದರು. ಕಾರ್ಡೆಲ್ ಚರ್ಚ್‌ನ ಧರ್ಮಗುರು ಮತ್ತು MDSC ಯ ಆಧ್ಯಾತ್ಮಿಕ ನಿರ್ದೇಶಕ ಕ್ಲಿಫರ್ಡ್ ಫೆರ್ನಾಂಡಿಸ್, “ನಾವು ರೂಪಾಂತರಗೊಳ್ಳಲು ರಚಿಸಲ್ಪಟ್ಟಿದ್ದೇವೆ ಮತ್ತು ಕರೆಯಲ್ಪಟ್ಟಿದ್ದೇವೆ” ಎಂಬ ವಿಷಯದ ಮೇಲೆ ಧರ್ಮೋಪದೇಶವನ್ನು ನೀಡುತ್ತಾ ಭಗವಂತನಲ್ಲಿ ಧೃಡ ನಂಬಿಕೆ ಮತ್ತು ದೇವರ ವಾಕ್ಯದ ಅನುಸರಣೆ ಕುಟುಂಬ ಜೀವನದಲ್ಲಿ ನವೀಕರಣ ತರಲು ಸಾಧ್ಯ ಎಂದು ಹೇಳಿದರು.

BE05

BE06

BE07

BE08

BE09

BE10

BE11

BE12

BE19

BE20

BE21

BE22

BE23

BE24

ರೆ.ಫಾ.ಎಡಟ್ಟು ವಿ.ಸಿ. ದೇವರ ವಾಕ್ಯದ ಮೇಲೆ ಪ್ರವಚನೆ ಮತ್ತು ವಿಮೋಚನೆ ಪ್ರಾರ್ಥನೆ ನಡೆಸಿ ಭಕ್ತರನ್ನು ಆಳವಾಗಿ ದೇವರಲ್ಲಿ ಸೆಳೆಯುವಲ್ಲಿ ಪ್ರೇರಣಾದಾಯಕಾರಾದರು.
ರೆ.ಫಾ.ಎಡಟ್ಟು ಅವರಿಗೆ ಫಾದರ್ ಆಂಡ್ರ್ಯು ಡಿಸೋಜಾ ಮತ್ತು ಫಾ ಜೋಸೆಫ್ ಮಾರ್ಟಿಸ್ ಭಾಷಾಂತರಕಾರರಾಗಿದ್ದರು. ಕೊನೆಯಲ್ಲಿ, ಕುಟುಂಬ ನವೀಕರಣಕ್ಕೆ ವಿಶೇಷ ಪ್ರಾರ್ಥನೆ ನಡೆಯಿತು.

“MDSCಯ ಮುಂಬರುವ ಕಾರ್ಯಕ್ರಮಗಳು ಮತ್ತು ಅದರ ಇತಿಹಾಸವು www.ccrmangalore.in ನಲ್ಲಿ ಲಭ್ಯವಿರುತ್ತದೆ” ಎಂದು ಸಂಯೋಜಕರಾದ ಶ್ರೀ ಕೆವನ್ ಹೇಳಿದರು.

■  ವರದಿ / ಚಿತ್ರ : ಕೆನರಾ ಸಂವಹನ ಕೇಂದ್ರ

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.