ಬೋಂದೆಲ್ ಸಂತ ಲಾರೆನ್ಸ್ ದೇವಾಲಯದ ನವೀಕೃತ ಯೋಜನೆಗೆ ಸಹಾಯಾರ್ಥವಾಗಿ ಆಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಮಂಗಳೂರು ಮತ್ತು ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ ಪ್ರಸ್ತುತಪಡಿಸಿದ 16 ನೇ ಸ್ಟ್ಯಾನ್ ನೈಟ್ ಕಾರ್ಯಕ್ರಮ ಫೆಬ್ರವರಿ 4, ಆದಿತ್ಯವಾರ ಬೊಂದೆಲ್ ಶಾಲಾ ವಠಾರದಲ್ಲಿ ನಡೆಯಿತು. ಬೋಂದೆಲ್ ದೇವಾಲಯದ ನವೀಕೃತ ಯೋಜನೆಗೆ ಸಹಾಯಾರ್ಥವಾಗಿ ರೂ ಐದು ಲಕ್ಷ ಚೆಕ್ , ಆಲ್ಫ್ರೆಡ್ ಬೆನ್ನಿಸ್ ಹಾಗೂ ಸ್ಟ್ಯಾನಿ ಮೆಂಡೊನ್ಸಾ – ಫಾ। ಆಂಡ್ರ್ಯೂ ಲಿಯೋ ಡಿಸೋಜರವರಿಗೆ ಹಾಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಲುವಿ ಪಿಂಟೊ,ಶ್ರೀ ಜೋಸೆಫ್ ಮಾಥಾಯಸ್, ಆಲ್ವಿನ್ ರೊಡ್ರಿಗ್ಸ್, ರವಿ ಪಿಂಟೊ, ಸಂತೋಷ್ ಸಿಕ್ವೆರಾ, ಕು। ಆಂಡ್ರಿಯಾ ಸಿಕ್ವೆರಾ, ಡಾ। ಪ್ರೀತಿ ಡಿಸೋಜ, ರಾಯ್ ಕಾಸ್ಟೆಲಿನೊ, ಜೊನ್ ಡಿ ಸಿಲ್ವಾ ಮತ್ತು ಫೆಲಿಕ್ಸ್ ಮೊರಾಸ್ ಉಪಸ್ಥಿತರಿದ್ದರು.
ಸಂಜೆ ಗಂಟೆ. 6.೦೦ರಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಂಗಳೂರಿನ ಹೆಸರಾಂತ ಗಾಯಕ-ಗಾಯಕಿರಿಂದ ಸಂಗೀತ ರಸಮಂಜರಿ, ಜೊಸ್ವಿನ್ ಪಪ್ವಾನರಿಂದ ಸಂಗೀತ , ಮೆಮರಿ ಮಂಗಳೂರು ಕಲಾವಿದರಿಂದ ಹಾಸ್ಯ ಕಾರ್ಯಕ್ರಮ, ಅರ್ಬನ್ ಗ್ರೂವ್ ಅವರಿಂದ ನೃತ್ಯ . ಒಂದೇ ವೇದಿಕೆಯಲ್ಲಿ ಪ್ರೇಕ್ಷಕರಿಗೆ ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು . ಈ ಕಾರ್ಯಕ್ರಮವನ್ನು ಲೆಸ್ಲಿ ರೇಗೊ ಕಾರ್ಯಕ್ರಮ ನಿರೂಪಿಸಿದರು.




