spot_imgspot_img
spot_img

ಸುರತ್ಕಲ್ ಎಂ.ಸಿ.ಸಿ. ಬ್ಯಾಂಕ್ ನೂತನ ಆವರಣ ಉದ್ಘಾಟನೆ; ರಜತ ಮಹೋತ್ಸವ ಆಚರಣೆ

ಗ್ರಾಹಕರ ಅನುಕೂಲಕ್ಕಾಗಿ, ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್‌ನ ಸುರತ್ಕಲ್ ಶಾಖೆಯನ್ನು 26.01.2024ರಂದು ಲ್ಯಾಂಡ್ ಲಿಂಕ್ಸ್ ಪರ್ಲ್, ಸರ್ವಿಸ್ ರಸ್ತೆ, ಸುರತ್ಕಲ್, ಮಂಗಳೂರಿನ ನೆಲ ಮಹಡಿಯಲ್ಲಿರುವ ಸಂಪೂರ್ಣ ಹವಾನಿಯಂತ್ರಿತ ಆವರಣಕ್ಕೆ ಸ್ಥಳಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಸುರತ್ಕಲ್ ಶಾಖೆಯ ಬೆಳ್ಳಿಹಬ್ಬವನ್ನು ಆಚರಿಸಲಾಯಿತು.

MCC70

MCC13

MCC12

ಸುರತ್ಕಲ್ ಶಾಖೆಯ ನೂತನ ಆವರಣವನ್ನು ಅಧ್ಯಕ್ಷ ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ಉದ್ಘಾಟಿಸಿದರು. ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಚರ್ಚಿನ  ಧರ್ಮಗುರು ರೆ| ಫಾ| ಆಸ್ಟಿನ್ ಪೀಟರ್ ಪೆರಿಸ್ ಅವರು ನೂತನ ಆವರಣವನ್ನು ಆಶೀರ್ವಚಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್, ಮಂಗಳೂರು ಇದರ ಮಾಜಿ ಜನರಲ್ ಮ್ಯಾನೇಜರ್ ಶ್ರೀ ಜೋಸೆಫ್ ಕ್ವಾಡ್ರಸ್ ಮತ್ತು ಗೌರವ ಅತಿಥಿಯಾಗಿ ಉದ್ಯಮಿ ಶ್ರೀ ರಾಜೇಶ್ ಶೆಟ್ಟಿಗಾರ್ ಹಾಜರಿದ್ದರು. ಸೇಫ್ ರೂಮನ್ನು ಮುಖ್ಯ ಅತಿಥಿಗಳಾದ ಶ್ರೀ ಜೋಸೆಫ್ ಕ್ವಾಡ್ರಸ್ ಉದ್ಘಾಟಿಸಿದರು. ಗೌರವ ಅತಿಥಿ ಶ್ರೀ ರಾಜೇಶ್ ಶೆಟ್ಟಿಗಾರ್ ಇ-ಸ್ಟ್ಯಾಂಪ್ ಸೌಲಭ್ಯವನ್ನು ಉದ್ಘಾಟಿಸಿದರು. ಉದ್ಘಾಟನಾ ಮತ್ತು ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ವಹಿಸಿದ್ದರು.

MCC52

MCC11

MCC69

MCC67

MCC15

ಬ್ಯಾಂಕ್‌ನ ಅಧ್ಯಕ್ಷ ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಶಾಖೆಯನ್ನು ನೆಲಮಹಡಿಯಲ್ಲಿ ಹೆಚ್ಚು ಅನುಕೂಲಕರ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಕಳೆದ ವರ್ಷ ನಡೆದ ಗ್ರಾಹಕರ ಸಭೆಯಲ್ಲಿ ಆಡಳಿತ ಮಂಡಳಿ ನೀಡಿದ ಭರವಸೆಯನ್ನು ಸಭೆಗೆ ತಿಳಿಸಿದರು. ಪಾರ್ಕಿಂಗ್ ಸೌಲಭ್ಯ ಪೂರೈಸಲಾಗಿದ್ದು, ಸದ್ಯ ಎಂ.ಸಿ.ಸಿ ಬ್ಯಾಂಕ್‌ನಲ್ಲಿ ಲಭ್ಯವಿರುವ ಎಲ್ಲಾ ಬ್ಯಾಂಕಿಂಗ್ ಸೇವೆಗಳು – ರಾಷ್ಟ್ರೀಕೃತ ಮತ್ತು ಇತರ ವಾಣಿಜ್ಯ ಬ್ಯಾಂಕ್‌ಗಳಿಗೆ ಸಮಾನವಾಗಿದ್ದು, ಗ್ರಾಹಕರ ಅಗತ್ಯತೆ ಮತ್ತು ಆಶೋತ್ತರಗಳಿಗೆ ಬ್ಯಾಂಕ್ ಸ್ಪಂದಿಸುತ್ತಿದೆ. ಗ್ರಾಹಕರ ಬ್ಯಾಂಕಿಂಗ್ ಅಗತ್ಯಗಳಿಗೆ ಆದ್ಯತೆ ನೀಡುವ ಮೂಲಕ ಹೆಚ್ಚು ಗ್ರಾಹಕ ಕೇಂದ್ರಿತವಾಗಿರಲು ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಬ್ಯಾಂಕನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ ಮತ್ತು ಬ್ಯಾಂಕ್‌ನೊಂದಿಗೆ ನಿಧಿಯ ಸುರಕ್ಷತೆಗಾಗಿ ಠೇವಣಿಗಳನ್ನು ಡಿಐಜಿಸಿಸಿ ವಿಮೆ ಮಾಡಲಾಗಿದೆ. 112 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಬ್ಯಾಂಕನ್ನು ಬೆಂಬಲಿಸಿ ಬ್ಯಾಂಕ್‌ನ ಪ್ರಗತಿಯೊಂದಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲು ಸಹಕರಿಸುವಂತೆ ಗ್ರಾಹಕರಿಗೆ ಕರೆ ನೀಡಿದರು. ಸದಸ್ಯರು, ಗ್ರಾಹಕರು, ಆಡಳಿತ ಮಂಡಳಿಯವರು ತೋರಿದ ಬೆಂಬಲ ಮತ್ತು ವಿಶ್ವಾಸ ಹಾಗೂ ಸಿಬ್ಬಂದಿ ವರ್ಗದ ಪರಿಶ್ರಮದಿಂದ ತಾವು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾಗಲು ಸಹಕಾರಿಯಾಗಿದೆ ಹಾಗೂ ಬ್ಯಾಂಕ್‌ನ 1000 ಕೋಟಿ ವ್ಯವಹಾರ ವಹಿವಾಟಿನ ಮೈಲಿಗಲ್ಲು ಸಾಧನೆ ಮತ್ತು ಈ ಸಂದರ್ಭದಲ್ಲಿ ಪರಿಚಯಿಸಲಾದ ಕೊಡುಗೆಗಳ ಕುರಿತು ಅವರು ಸಭೆಗೆ ತಿಳಿಸಿದರು.

MCC16

MCC61

MCC62

MCC66

ನೂತನ ಆವರಣವನ್ನು ಆಶೀರ್ವದಿಸಿದ ರೆ| ಫಾ| ಆಸ್ಟಿನ್ ಪೀಟರ್ ಪೆರಿಸ್ ಶಾಖೆಯನ್ನು ಹೆಚ್ಚಿನ ಅನುಕೂಲಕ್ಕಾಗಿ ಸ್ಥಳಾಂತರಣೆ ಮತ್ತು ಸುರತ್ಕಲ್ ಶಾಖೆಯ ಬೆಳ್ಳಿಹಬ್ಬವನ್ನು ಆಚರಣೆಯ ಸಂದರ್ಭದಲ್ಲಿ ಅಭಿನಂದಿಸಿದರು. ಬ್ಯಾಂಕಿನ ಸುಧಾರಣೆಗಾಗಿ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಜಾರಿಗೊಳಿಸುವ ಮೂಲಕ ಬ್ಯಾಂಕ್ ಸ್ಥಿರ ಗತಿಯಲ್ಲಿ ಸಾಗಬೇಕೆಂದು ಅವರು ಕರೆ ನೀಡಿದರು.

MCC56

MCC14

MCC101

MCC54

ಶ್ರೀ ಜೋಸೆಫ್ ಕ್ವಾಡ್ರಸ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಗ್ರಾಹಕ ಸ್ನೇಹಿ ವಾತಾವರಣವನ್ನು ಒದಗಿಸಿದ್ದಕ್ಕಾಗಿ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಬ್ಯಾಂಕಿನ ಬೆಳವಣಿಗೆಯಲ್ಲಿ ಅಧ್ಯಕ್ಷರ ದೂರದೃಷ್ಟಿ ಮತ್ತು ನಾಯಕತ್ವವನ್ನು ಅವರು ಶ್ಲಾಘಿಸಿದರು. ಕಳೆದ 5 ವರ್ಷಗಳಲ್ಲಿ ದ್ವಿಗುಣಗೊಂಡಿರುವ ಬ್ಯಾಂಕಿನ ಹಣಕಾಸು ವಿವರಗಳನ್ನು ಮಂಡಿಸಿದರು.

MCC58

ಈ ಸಂದರ್ಭದಲ್ಲಿ ಬ್ಯಾಂಕ್ ಶಾಖೆ ಆರಂಭವಾದ ದಿನದಿಂದ ಇಲ್ಲಿಯವರೆಗೂ ಜೊತೆಗಿದ್ದ 25 ಗ್ರಾಹಕರನ್ನು ಬೆಳ್ಳಿಹಬ್ಬದ ಗ್ರಾಹಕರು ಎಂದು ಪರಿಗಣಿಸಿದರು. ಶಾಖೆಯ ಪ್ರಥಮ ವ್ಯವಸ್ಥಾಪಕರಾಗಿದ್ದ ಶ್ರೀ ಲೆಸ್ಲಿ ಪಾಯ್ಸ್ ಮತ್ತು ಹಿಂದಿನ ಆವರಣದ ಮ್ಹಾಲಕರಾದ ಶ್ರೀ ವಿಜಯ್ ಕುಮಾರ್ ಇಡ್ಯ ಮತ್ತು ಶ್ರೀ ಉದಯ ಶಂಕರ್ ರಾವ್ ಹಾಗೂ ನೂತನ ಆವರಣದ ಮ್ಹಾಲಕರಾದ ಶ್ರೀ ಕೇಶವ ಸಾಲಿಯಾನ್ ಮತ್ತು ಸಿವಿಲ್ ಇಂಜಿನಿಯರ್ ಶ್ರೀ ಕಾರ್ತಿಕ್ ಕಿರಣ್ ಇವರನ್ನು ಗೌರವಿಸಲಾಯಿತು.

ಅಧ್ಯಕ್ಷರು ಮುಖ್ಯ ಅತಿಥಿಗಳು ಮತ್ತು ಗೌರವಾನ್ವಿತ ಅತಿಥಿಗಳನ್ನು ಕೃತಜ್ಞತೆಯ ಸಂಕೇತವಾಗಿ ಸ್ಮರಣಿಕೆ ನೀಡಿ ಗೌರವಿಸಿದರು. ನಿರ್ದೇಶಕರಾದ ಡಾ ಜೆರಾಲ್ಡ್ ಪಿಂಟೊ, ಹೆರಾಲ್ಡ್ ಜಾನ್ ಮೊಂತೇರೊ, ಡೇವಿಡ್ ಡಿಸೋಜಾ, ಮೆಲ್ವಿನ್ ಅಕ್ವಿನಾಸ್ ವಾಸ್, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಐರಿನ್ ರೆಬೆಲ್ಲೊ, ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.

MCC60

MCC64

MCC65

MCC68

MCC63

MCC201

ಶಾಖೆಯ ಶಾಖಾ ಸಹಾಯಕ ನಿರ್ದೇಶಕರಾದ ಶ್ರೀ ಅನಿಲ್ ಪತ್ರಾವೊ ಸ್ವಾಗತಿಸಿದರು. ಶಾಖಾ ಪ್ರಬಂಧಕಿ ಶ್ರೀಮತಿ ಸುನೀತಾ ಡಿಸೋಜಾ ವಂದಿಸಿದರು. ಮನೋಜ್ ಫೆರ್ನಾಂಡಿಸ್, ಕಿರೆಂ ಕಾರ್ಯಕ್ರಮ ನಿರೂಪಿಸಿದರು.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.