ಮಂಗಳೂರಿನ ಸೇಕ್ರೆಡ್ ಹಾರ್ಟ್ ಕೆರಿಯರ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಐಐಸಿಟಿ ಕಂಪ್ಯೂಟರ್ ತರಬೇತಿ ಕೇಂದ್ರಗಳು ಭಾರತ ದೇಶದಾದ್ಯಂತ ಕಾರ್ಯಾಚರಿಸುತ್ತಿದ್ದು, ಡಿಸೆಂಬರ್ 1 ನೇ ತಾರೀಕಿನಂದು, ಮಂಗಳೂರು ಕುಲಶೇಖರದ ಪಿಂಟೋ ಕಾಂಪ್ಲೆಕ್ಸ್ ನಲ್ಲಿ 158 ನೇ ಕೇಂದ್ರವು ಉದ್ಘಾಟನೆಗೊಂಡಿತು.

ಯು. ಎಚ್. ಸಿ. ಕೆರಿಯರ್ ಅಕಾಡೆಮಿ, ಬೆಂಗಳೂರು ಇದರ ಆಡಳಿತ ನಿರ್ದೇಶಕರಾದ ಶ್ರೀ ಕೆನೆಡಿ ಪಿ. ಎ. ಡಿಸೋಜನವರು ತಮ್ಮ ಪತ್ನಿ ಹಾಗೂ ಪುತ್ರಿಯರೊಂದಿಗೆ ಸಂಸ್ಥೆಯನ್ನು ಉದ್ಘಾಟಿಸಿ ಸಂಸ್ಥೆಯ ಬಗ್ಗೆ ಕಿರು ಪರಿಚಯವನ್ನು ನೀಡಿದರು.
ಕುಲಶೇಖರದ ಹೋಲಿ ಕ್ರಾಸ್ ಚರ್ಚಿನ ಧರ್ಮ ಗುರುಗಳಾದ ವಂದನೀಯ ಪಾವ್ಲ್ ಸೆಬೆಸ್ಟಿಯನ್ ಡಿ ಸೋಜಾರವರು ನೂತನ ಸಂಸ್ಥೆಯನ್ನು ಆಶಿರ್ವದಿಸಿದರು. ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪ್ಲಾವಿಯ ಸಭಿಕರನ್ನು ಸ್ವಾಗತಿಸಿ, ಉಪ ಪ್ರಾಂಶುಪಾಲೆ ಶ್ರೀಮತಿ ಸುಜಿತಾ ಶಂಕರಲಿಂಗಂ ಧನ್ಯವಾದ ಸರ್ಮಪಿಸಿದರು.
ನೂತನ ಐಐಸಿಟಿ ಕೇಂದ್ರದಲ್ಲಿ ಸಾಮ್ಯಾನ ಹಾಗೂ ಉನ್ನತ ತರಬೇತಿಗಳಾದ SAP, ಡಿಜಿಟಲ್ ಮಾರ್ಕೆಟಿಂಗ್ , ಅಡ್ವಾನ್ಸ್ಡ್ ಎಕ್ಸೆಲ್, ಇಂಡಿಯನ್ & ಫಾರಿನ್ ಅಕೌಂಟಿಂಗ್, ಬ್ಯಾಂಕಿಂಗ್ & ಫೈನಾನ್ಸ್, ಸೊಪ್ಟ್‌ವೆರ್ ಇಂಜಿನಿರಿಂಗ್‌ಗಳಂತಹ ತರಬೇತಿಗಳನ್ನು ನೀಡಲಾಗುವುದೆಂದು ತಿಳಿಸಲಾಗಿದೆ.




