spot_imgspot_img
spot_img

ಮಂಗಳೂರು ಧರ್ಮಪ್ರಾಂತ್ಯದ ಸಂಸ್ಥೆಗಳ ವತಿಯಿಂದ ವ್ಯಸನ ವಿರುದ್ಧ ಕಾಲ್ನಡಿಗೆ

ವ್ಯಸನ ಮುಕ್ತ ಸಮಾಜದ ಕಡೆಗೆ ನಮ್ಮ ಕಾಲ್ನಡಿಗೆ ಎಂಬ ಗುರಿಯೊಂದಿಗೆ ಸಿ.ಓ.ಡಿ.ಪಿ/ ಬಾಂಧವ್ಯ, ಪಾದುವ ಕೊಲೆಜ್ ಒಫ್ ಕೊಮರ್ಸ್ & ಮ್ಯಾನೆಜ್‌ಮೆಂಟ್ ,ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ), ವೈಟ್ ಡಾವ್ಸ್ ಮಗಳೂರು ಜಂಟಿ ಸಂಯೋಜಕತ್ವದಲ್ಲಿ, ರೋಶನಿ ನಿಲಯ, ಸಂತ ಆಗ್ನೇಸ್ ಮಹಾ ವಿದ್ಯಾಲಯ, ಸಹಜೀವನ ಜಿಲ್ಲಾ ಒಕ್ಕೂಟದ ಸಹಕಾರದಿಂದ ಪಾದುವ ಸಿ.ಓ.ಡಿ.ಪಿಯಿಂದ ಬೆಂದೂರ್ ಚರ್ಚ್ ವರೆಗೆ ವ್ಯಸನ ವಿರೋದಿ ಕಾಲ್ನಡಿಗೆ ಜಾಗೃತಿ ಜಾಥಾ ನಡೆಯಿತು.

AD04

AD05

AD06

ಈ ನಡಿಗೆಯು ವ್ಯಸನ ಮುಕ್ತ ನವ ಸಮಾಜ ನಿರ್ಮಾಣ ಸಪ್ತಂಬರ್ ಜಾಗೃತಿ ಮಾಸ ಎಂಬ ಮಂಗಳೂರು ಧರ್ಮಪ್ರಾಂತ್ಯದ ಬಿಷಪರ ಚಿಂತನೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಕಮಿಷನ್ ರವರ ವ್ಯಸನ ಮುಕ್ತ ಮಂಗಳೂರು ನಗರದೆಡೆಗೆ ಎಂಬ ಕಾರ್ಯಕ್ರಮದ ಅಂಗವಾಗಿ ನಡೆಯಿತು.

 

AD07

AD03

AD01

AD02

ಬೆಂದೂರ್ ಚರ್ಚ್ ಧರ್ಮಗುರು ವಂ| ವಿನ್ಸೆಂಟ್ ಮೊಂತೇರೋ ರವರು ಕಾಲ್ನಡಿಗೆ ಸಂಪನ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಯುವಕರಿಗೆ ಸ್ಫೂರ್ತಿ ನೀಡಿದರು. ಕರ್ನಾಟಕ ಲೋಕಾಯುಕ್ತ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಸಿ.ಎ. ಸೈಮನ್ ರವರು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯ ಬಗ್ಗೆ ವಿವರ ನೀಡಿದರು. ಕಣಚೂರು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ| ವಿಕ್ಟರ್ ರೋಹನ್ ಮೋನಿಸ್ ರವರು ಡ್ರಗ್ಸ್ ಪರಿಣಾಮದ ಬಗ್ಗೆ ವಿವರಿಸಿದರು.

ಕಾರ್ಯಕ್ರಮಕ್ಕೆ ಸಿ.ಓ.ಡಿ.ಪಿ ನಿರ್ದೇಶಕರಾದ ವಂ| ವಿನ್ಸೆಂಟ್ ಡಿಸೋಜಾ ರವರು ಸ್ವಾಗತಿಸಿದರು. ಪಾದುವ ಕಾಲೇಜು ಪ್ರಾಂಶುಪಾಲ ವಂ| ಅರುಣ್ ಲೋಬೊ ರವರು ವಂದನಾರ್ಪಣೆ ಮಾಡಿದರು. ಕಾಲೇಜ್ ಉಪನ್ಯಾಸಕ ಶ್ರೀ ರೋಹನ್ ಸಾಂತುಮಾಯೇರ್ ಕಾರ್ಯಕ್ರಮ ನಿರೂಪಿಸಿದರು.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.