ಎಂ.ಜಿ.ಎಂ ಕಾಲೇಜು, ಉಡುಪಿ ಮತ್ತು ಶಾರದಾ ಪ್ರತಿಷ್ಠಾನ, ಮಾಗಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ, ಇಂದಿನ ಯುವ ಜನತೆ ತ್ವರಿತ ಗತಿಯ ಆಕಾಂಕ್ಷೆಗಳ ಹಿಂದೆ ಬಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಿದ್ದಿ ಪಡೆಯಲು ಹಂಬಲಿಸುವುದನ್ನು ಕಾಣಬಹುದು, ಅದು ತಪ್ಪೇನು ಅಲ್ಲ. ಆದರೆ ಸಾಹಿತ್ಯ ಪರಂಪರೆಯಲ್ಲಿ ಕಾಯುವುದು ಎಂದರೆ ತಪಸ್ಸು ತನ್ಮೂಲಕ ಕೃತಿ ಲೋಕಾರ್ಪಣೆ ಯಾಗುವುದೇ ಯಶಸ್ಸು ಎಂದು ಹೇಳಿದರು.

ಅವರ ‘ರಕ್ತವರ್ಣೆ’ ಕನ್ನಡ ನಾಟಕವನ್ನು ಕೊಂಕಣಿಯ ಕವಿ, ಸಾಹಿತಿ ವೆಂಕಟೇಶ ನಾಯಕ್ ಇವರು ಕೊಂಕಣಿಗೆ ಅನುವಾದಿಸಿದ ‘ರಕ್ತವರ್ಣೆ’ ಮತ್ತು ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಯವರ ‘ಧರ್ಮಯುದ್ಧ’ ಕಾದಂಬರಿಯ ನಾಟಕದ ರೂಪಾಂತರ ಮಾಡಿದ ಅಂಶುಮಾಲಿಯವರ ಉಪಸ್ಥಿತಿಯಲ್ಲಿ ಈ ಎರಡು ಕೃತಿಗಳನ್ನು ಡಾ. ನಾ ಮೊಗಸಾಲೆ ದಂಪತಿಗಳು ಲೋಕಾರ್ಪಣೆ ಮಾಡಿದರು.




ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ವಿಭಾಗದ ಮುಖಸ್ಥರಾಗಿರುವ ಶ್ರೀಮತಿ ಫ್ಲೋರಾ ಕ್ಯಾಸ್ತೆಲಿನೊ ಕೃತಿ ಪರಿಚಯ ನೀಡಿದರು, ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮಿ ನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು, ಶಾರದಾ ಪ್ರತಿಷ್ಠಾನದ ಪ್ರಕಾಶಕರಾದ ಗಿರೀಶ್ ಮಾಗಡಿ ಉಪಸ್ಥಿತರಿದ್ದರು.
ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು, ವಿನಾಯಕ ಪೈ ಧನ್ಯವಾದ ಸಮರ್ಪಿಸಿದರು.




