spot_imgspot_img
spot_img

ಶಂಕರಪುರದ ಜೆನಿಶಾ ಲೋಬೊ, ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ

ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 5 ಮತ್ತು 6 ರಂದು 2 ದಿನಗಳ ಕಾಲ ನಡೆದ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಶಂಕರಪುರದ ಜೆನಿಶಾ ಲೋಬೊ 7 ರಿಂದ 18 ವರ್ಷದ ವಯೋಮಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.

JLP02

ಆಗಸ್ಟ್ 5 ರಂದು ಬೆಳಿಗ್ಗೆ 10.30 ಕ್ಕೆ ರಾಜ್ಯ ಸರ್ಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಇವರುಗಳು ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದರು. ಸಮಾರಂಭ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ವಹಿಸಿದ್ದರು.

JLP01

JLP07
ಅಮೇರಿಕಾ, ಶ್ರೀಲಂಕಾ ನೇಪಾಳ, ಮಲೇಷಿಯಾ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಿಂದ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಈ ಕರಾಟೆ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, 7 ರಿಂದ 18 ವರ್ಷ ವಯೋಮಾನದ ಕ್ರೀಡಾಪಟುಗಳಿಗೆ ಕಟಾ ಮತ್ತು ಕುಮಟೆ ವಿಭಾಗದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

JLP03

ಜುಲೈ ತಿಂಗಳಲ್ಲಿ ದಿನಾಂಕ  15 ಮತ್ತು 16 ರಂದು ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ರಾಷ್ಟ್ರ‍ೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜೆನಿಶಾ ಚಿನ್ನದ ಪದಕದ ಜೊತೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದರು. ಕಟಾ ಮತ್ತು ಕುಮಟೆ ಎರಡೂ ವಿಭಾಗಗಳಲ್ಲಿ ಭಾಗವಹಿಸಿದ್ದ ಜೆನಿಶಾ ಕುಮಟೆಯಲ್ಲಿ ತೃತೀಯ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಕಳೆದ ವರ್ಷಗಳಲ್ಲಿ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಆಯೋಜಿಸಲಾದ ವಿವಿಧ ಕರಾಟೆ ಸ್ಪರ್ಧೆಗಳಲ್ಲಿ ಜೆನಿಶಾ ಬೆಳ್ಳಿ  ಮತ್ತು ಕಂಚಿನ ಪದಕಗಳನ್ನು ಗಳಿಸುತ್ತಲೇ ಬಂದಿರುತ್ತಾರೆ.  ಶಂಕರಪುರ (ಪಾಂಗ್ಳಾ) ಚರ್ಚಿನ ವತಿಯಿಂದ ಈ ಸಲುವಾಗಿ ಅವರಿಗೆ ಸನ್ಮಾನವನ್ನು ಮಾಡಲಾಗಿತ್ತು.

JLP04

JLP05

ಪ್ರಸ್ತುತ ಉಡುಪಿಯ ಮಹಿಳಾ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೆನಿಶಾ, ಪಾಂಗಾಳ ಶಂಕರಪುರದ ಪ್ರಗತಿಪರ ಕೃಷಿಕರಾದ ಜೋಸೆಫ್ ಮತ್ತು ನೀಮಾ ಲೋಬೊ ದಂಪತಿಯ ಪುತ್ರಿಯಾಗಿದ್ದು, ಕರಾಟೆಯಲ್ಲಿ ಶಂಕರಪುರ ಸುರೇಶ್ ಆಚಾರ್ಯ ಅವರ ಶಿಷ್ಯೆಯಾಗಿದ್ದಾರೆ.

ಪದವಿ ಶಿಕ್ಷಣ ಪಡೆದು ಭಾರತೀಯ ಆಡಳಿತ ಸೇವೆಗೆ ಭರ್ತಿಯಾಗುವ ಗುರಿಯನ್ನಿಟ್ಟುಕೊಂಡು ತಮ್ಮ ಓದು ಮತ್ತು ಅಭ್ಯಾಸ ಮುಂದುವರೆಸಿದ್ದಾರೆ.

ವರದಿ : ಅಲ್ಪೋನ್ಸ್, ಪಾಂಗಾಳ

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

  1. ಇಂದಿನ ಮಕ್ಕಳು, ವಿಶೇಷವಾಗಿ ಹೆಣ್ಣುಮಕ್ಕಳು ಕ್ರೀಡೆಗಿಂತ ಓದಿನ ಕಡೆಗೇ ಹೆಚ್ಚು ಆಸಕ್ತಿ ತೋರುತ್ತಿರುವಾಗ ಜೆನಿಶಾಳ ಸಾಧನೆ ಹೆಮ್ಮೆ ಪಡುವಂತದ್ದು. ಇದರಲ್ಲಿ ಜೆನಿಶಾಳ ತಂದೆ ತಾಯಂದಿರ ಪ್ರೋತ್ಸಾಹವೂ ಮೆಚ್ಚುವಂತಾದ್ದು. Congratulations ಜೆನಿಶಾ.

  2. Great achievement,congratulations to Jenisha and the proud parents. Wishing you all the very best in future competitions. God bless you.

  3. Jenisha Lobo has done very well. Hearty Congrats to you dear Jenisha. God bless you all the more. Wishing you all the best and all success for your future .

  4. We are proud of you dear Jenisha on your greatest achievements. Congratulations 🎊 n all the best in future missions.. thank you Alphonse for sharing Jenisha’s post

  5. Great achievement,congratulations to Jenisha and the proud parents. Wishing you all the very best in future competitions.

  6. Congratulations 👏🎉
    Great achievement 🎉
    It’s a proud moment for Catholics 👏
    Wish you a great success in your future 💗

LEAVE A REPLY

Please enter your comment!
Please enter your name here

ಅಲ್ಪೋನ್ಸ್, ಪಾಂಗ್ಳಾ
ಆತಾಂ ಉಡುಪಿ ದಿಯೆಸೆಜಿಚ್ಯಾ ಪಾಂಗ್ಳಾಂತ್ ವಸ್ತಿ ಕರುನ್ ಆಸ್ಚೊ ಅಲ್ಪೋನ್ಸ್ ಮೆಂಡೋನ್ಸಾ ಅಬುಧಾಬಿಂತ್ ಜಾಯ್ತೊ ತೇಂಪ್ ಕೊರ್ಪೊರೇಟ್ ಕಂಪ್ಣೆಂತ್ ಉಂಚ್ಲ್ಯಾ ಹುದ್ದ್ಯಾರ್ ವಾವುರ್ನ್ ಆಯ್ಲೆವಾರ್ ನಿವೃತ್ತ್ ಜಾವ್ನ್, ಉಡುಪಿಂತ್ ಸಿವಿಟೆಕ್ ಸಂಸ್ಥ್ಯಾಂತ್ ಸಾಂಗಾತಿ ಜಾವ್ನ್ ವಾವುರ್ನ್ ಆಸಾ. ಕಲಾ ಆನಿ ಸಂಗೀತಾಂತ್ ಸಮಾನ್ ಆಸಕ್ತೆಚ್ಯಾ ಸಾಂಗಾತ್ಯಾಂಕ್ ಘೆವ್ನ್ ಅಬುಧಾಭಿಂತ್ ಮಂಗ್ಳುರ್ಚಿಂ ಮೊತಿಯಾಂ ಮ್ಹಳ್ಳೆಂ ಸಂಘಟನ್ ಸುರ್ವಾತುನ್, ಜಾಯ್ತಿಂ ವರ್ಸಾಂ ಕಾರ‍್ಯಾಳ್ ಸಾಂದೊ ಜಾವ್ನ್ ತಾಣೆ ಸೆವಾ ದಿಲ್ಯಾ. ಯುಎಇ ಥಾವ್ನ್ ಮೆಂಗ್ಲೂರಿಯನ್ ಡೊಮ್ ಕೊಮ್ ಆನಿ ಬೆಳ್ಳೆವಿಶನ್ ಹ್ಯಾ ಜಾಳಿಜಾಗ್ಯಾಂಕ್ ಪ್ರತಿನಿಧಿ ಜಾವ್ನ್ ಸೆವಾ ದಿಲಾ. 70 ಚ್ಯಾ ದಶಕಾಂತ್ ಮಂಗ್ಳುರ್ ದಿಯೆಸೆಜಿಂತ್ ಸಿವೈಎಮ್ ಆನಿ ಅಯ್‌ಕಫ್ - ಹ್ಯಾ ಸಂಘಟನಾಂನಿ ತೋ ಕಾರ್ಯಾಳ್ ಜಾವ್ನಾಸ್ಲೊ. ಏಕ್ ಗಾವ್ಪಿಯ್ ಜಾವ್ನಾಸ್ಚ್ಯಾ ತಾಣೆ ಅಬುಧಾಬಿಂತ್ KCO ಸಂಘಟನಾಂತೀ ಕಾಮ್ ಕೆಲಾಂ. ಏಕ್ ಉತ್ತೀಮ್ ಫೊಟೊಗ್ರಾಫರ್ ಆನಿ ವರ್ದೆಗಾರ್ ಜಾವ್ನಾಸ್ಚ್ಯಾ ತಾಚೆ ವಿಶೇಸ್ ವರ್ದ್ಯೊ ಚಡುಣೆ ಸರ್ವ್ ಇಂಗ್ಲಿಷ್ ಜಾಳಿಜಾಗ್ಯಾಂನಿ ಫಾಯ್ಸ್ ಜಾತೇ ಆಸಾತ್. ಕಿಟಾಳ್ ಜಾಳಿಜಾಗ್ಯಾರ್ ಅಲ್ಪೋನ್ಸ್ ಮೆಂಡೋನ್ಸಾ ಹಾಂಚೆ ಕವಿತಾ, ಲೇಕನಾಂ ತವಳ್ ತವಳ್ ಫಾಯ್ಸ್ ಜಾವ್ನ್ ಆಸಾತ್.