ಹುಬ್ಬಳ್ಳಿಯ ಸರಸ್ವತಿ ಪ್ರಭಾ ಕೊಂಕಣಿ ಮಾಸಿಕದ ವತಿಯಿಂದ ನೀಡುವ `ಸರಸ್ವತಿ ಪ್ರಭಾ ಪುರಸ್ಕಾರ – 2024 ಅನ್ನು ದಿನಾಂಕ. 19 – 05 – 2024 ರಂದು ರವಿವಾರ ಕುಂದಾಪುರದಲ್ಲಿ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ ಅವರಿಗೆ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕುಂದಪ್ರಭಾ ಪತ್ರಿಕೆಯ ಸಂಪಾದಕ ಶ್ರೀ ಯು.ಎಸ್. ಶೆಣೈ, ಸರಸ್ವತಿ ಪ್ರಭಾದ ಸಂಪಾದಕ ಆರಗೋಡು ಸುರೇಶ ಶೆಣೈ, ಅಪ್ಪುರಾಯ ಪೈ, ಪ್ರದೀಪ ಕುಮಾರ ಪಂಡಿತ, ದಿನೇಶ ಪ್ರಭು, ವಿಠ್ಠಲ ಕಾಮತ್, ಮಾಧವ ಶಾನುಭೋಗ, ವಡೇರಹೋಬಳಿ, ಶಿಕ್ಷಕಿ ಲತಾ ಭಟ್ ಸಹಿತ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ ಕುಂದಾಪುರ ಇವರ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದು ಶ್ರೀಮತಿ ಲಕ್ಷ್ಮೀದೇವಿ ವಾಸುದೇವ ಕಾಮತ ಅವರಿಗೆ ಶುಭ ಹಾರೈಸಿದರು.

ಅವರಿಗೆ ಸರಸ್ವತಿ ಪ್ರಭಾದ ವತಿಯಿಂದ ಮೈಸೂರು ಪೇಟ ತೊಡಿಸಿ, ಶಾಲು, ಹಾರ, ಪಂಚಫಲ ಸಹಿತ ಸ್ಮರಣಿಕೆ, ಸನ್ಮಾನ ಪತ್ರ ಹಾಗೂ ರೂ. 5,000/-ಗಳನ್ನು ನೀಡಿ ಸತ್ಕರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಪ್ಪುರಾಯ ಪೈ, ಲತಾ ಭಟ್ ಹಾಗೂ ಯು.ಎಸ್. ಶೆಣೈ ಅವರನ್ನೂ ಸತ್ಕರಿಸಿ ಗೌರವಿಸಲಾಯಿತು.




