ಮಂಗಳೂರು : ಇಲ್ಲಿನ ಕೆನರಾ ಹೈಸ್ಕೂಲ್ ಅಸೊಸಿಯೆಶನ್ ವತಿಯಿಂದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನವನ್ನು ಶನಿವಾರ ಮೇ ೧೮ ತಾರೀಕಿಗೆ ಮಹಾತ್ಮಾ ಗಾಂಧಿ ಮ್ಯೂಸಿಯಂನ್ಲಲಿ ಆಚರಿಸಲಾಯಿತು. ಮಂಗಳೂರು ಪ್ರಾಂತ್ಯ ಇಂಟ್ಯಾಕ್ ಸಂಚಾಲಕರಾದ ಸುಭಾಸ್ ಚಂದ್ರ ಬಸು ಮುಖ್ಯ ಭಾಷಣ ಮಾಡಿದರು. ಕೇವಲ ನಾಲ್ಕು ಗೋಡೆಗಳೊಳಗೆ ಮಾತ್ರವಲ್ಲದೆ ನಮ್ಮೆಲ್ಲರ ಸುತ್ತುಮುತ್ತಿನಲ್ಲಿ ಕೂಡಾ ಶಿಕ್ಷಣ ಪಡೆಯುವಂತಹ ನಾನಾ ವಸ್ತುಗಳು ಇವೆ ಎಂಬ ಅರಿವು ನಮಗೆ ಬೇಕೆಂದು ಶ್ರೀಯುತ ಬಸು ಅವರ ಭಾಷಣದಲ್ಲಿ ಹೇಳಿದರು.





ತನ್ನ ವಿದ್ಯಾರ್ಥಿ ದಿನಗಳ ನೆನಪನ್ನು ಮಾಡುತ್ತಾ ಕಸ್ತೂರಿ ಬಾಲಕೃಷ್ಣ ಪೈ ಅವರು ವಿದ್ಯಾರ್ಥಿನಿಯರೂ ಕ್ರಿಕೆಟ್ ಪಂಗಡಗಳನ್ನು ರೂಪಿಸಿ ಪ್ರಾದೇಶಿಕ ಹಾಗೂ ರಾಷ್ಟ್ರೀಯಮಟ್ಟದ ಪಂದ್ಯಗಳಲ್ಲಿ ಭಾಗವಹಿಸಬೇಕೆಂದು ಹೇಳಿಕೊಂಡರು. ಕೆನರಾ ವಿದ್ಯಾ ಸಂಸ್ಥೆಯ ವತಿಯಿಂದ ನಡೆಸುವ ಮಹಾತ್ಮಾ ಗಾಂಧಿ ವಸ್ತು ಸಂಗ್ರಹಾಲಯದ ನೂರಕ್ಕೂ ಮೇಲೆ ವರ್ಷಗಳ ಇತಿಹಾಸವನ್ನು ಮ್ಯೂಸಿಯಂ ನಿರ್ದೇಶಕರಾದ ಪಯ್ಯನ್ನೂರು ರಮೇಶ್ ಪೈ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಹೇಳಿದರು.



ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟೀಯ ಸೇವಾ ಯೋಜನೆಯ ಸ್ವಯಂ ಸೇವಕರು, ಕೆನರಾ ಇಂಗ್ಲೀಶ್ ಹೈಯರ್ ಪ್ರೈಮರಿ ಶಾಲೆಯ ಅಧ್ಯಾಪಕರು, ಮತ್ತು ಸಾರ್ವಜನಿಕರು ಮ್ಯೂಸಿಯಂ ಸಂದರ್ಶನೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.




