spot_imgspot_img
spot_img

ಫಾದರ್ ಮುಲ್ಲರ್‌ ಸಂಸ್ಥೆಯಲ್ಲಿ ಸೂಲಗಿತ್ತಿಯರ ದಿನಾಚರಣೆ

ಮಂಗಳೂರು, ಮೇ 15, 2024 – ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ (ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಒಂದು ಘಟಕ ) ನ ಪ್ರಸೂತಿ ಮತ್ತು ಸ್ತ್ರೀ ರೋಗ ಶುಶ್ರೂಷ ವಿಭಾಗವು, ಮಂಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಸೂಲಗಿತ್ತಿ ದಿನದ ಆಚರಣೆ ಯನ್ನು ಸಂಸ್ಥೆಯ ದಶವಾರ್ಷಿಕ ಸ್ಮಾರಕ ಸಭಾಂಗಣದಲ್ಲಿ ಇಂದು ಆಯೋಜಿಸಿತ್ತು. ಕಾರ್ಯಕ್ರಮವು ಬೆಳಿಗ್ಗೆ 9 ಘಂಟೆಗೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿತ್ತಿರುವ ಡಾ। ದೀಪಾ ಕಣಗಲ್ ರವರ ಎಚ್ ಪಿ ವಿ ಕುರಿತ ಪ್ರಬುದ್ಧ ಭಾಷಣದೊಂದಿಗೆ ಪ್ರಾರಂಭವಾಯಿತು.

FMN1 FMN2 FMN6 FMN7 FMN8 FMN9 FMN10 FMN11 FMN12 FMN13 FMN14 FMN15 FMN16 FMN17 FMN18 FMN19 FMN20 FMN21 FMN22

ಅಧಿಕೃತ ಉದ್ಘಾಟನೆಯು ಬೆಳಿಗ್ಗೆ 10 ಘಂಟೆಗೆ ನೆರವೇರಿತು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿಯಾದ ಶ್ರೀಮತಿ ರಮ್ಯಶ್ರೀ ಎಸ್, ಆಗಮಿಸಿದವರಿಗೆ ಆತ್ಮೀಯ ಸ್ವಾಗತವನ್ನು ನೀಡಿದರು. ಮಂಗಳೂರಿನ ಜಿಲ್ಲಾ ಆರೋಗ್ಯಧಿಕಾರಿಯಾದ ಡಾ ಎಚ್ ಆರ್ ತಿಮ್ಮಯ್ಯರವರು ಸಮಾಜಕ್ಕೆ ಸೂಲಗಿತ್ತಿಯರ ಮತ್ತು ಆಶಾ ಕಾರ್ಯಕರ್ತೆಯರ ಅಮೂಲ್ಯ ಕೊಡುಗೆಗಳ ಕುರಿತು ಒತ್ತಿ ಹೇಳಿದರು. ಅವರು ಕಲಿಕೆಯ ನಿರಂತರ ಸ್ವಭಾವವನ್ನು ಹಾಗೂ ತಾಯಂದಿರ ಮತ್ತು ದಾದಿಯರ ನಿರ್ಣಾಯಕ ಪಾತ್ರಗಳನ್ನು ಒತ್ತಿ ಹೇಳಿದರು. ಮಹಿಳೆಯರು ಅಥವಾ ದಾದಿಯರು ಇಲ್ಲದೆ ಪ್ರಪಂಚವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ತಿಳಿಸಿದರು.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲ್ಯೊರವರು ಅಧ್ಯಕ್ಷೀಯ ಭಾಷಣ ಮಾಡಿದರು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಅಗತ್ಯದ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದು ಆಗಾಗ್ಗೆ ಅವರು ಪಡುವ ಶ್ರಮವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಎತ್ತಿ ಹೇಳಿದರು ಮತ್ತು ಭಾಗವಹಿಸಿದ ಎಲ್ಲರಿಗೂ ಅವರಿಗೆ ಒದಗಿಸಿದ ಅವಕಾಶಗಳನ್ನು ಸದುಪಯೋಗ ಮಾಡುವಂತೆ ಪ್ರೋತ್ಸಾಹಿಸಿದರು. ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯಾದ ಶ್ರೀಮತಿ ದಮಯಂತಿ ಎನ್, ಅವರನ್ನು  ಮಹಿಳೆಯರು ಮತ್ತು ಮಕ್ಕಳಿಗಾಗಿ ಸಲ್ಲಿಸಿದ ಸಮರ್ಪಿತ ಸೇವೆಗಾಗಿ ಸನ್ಮಾನಿಸಲಾಯಿತು. ಶ್ರೀಮತಿ ಕ್ಲೆರಿಟ ಲೋಬೊರವರ ವಂದನಾರ್ಪಣೆಯೊಂದಿಗೆ ಅಧಿವೇಶನವು ಮುಕ್ತಾಯಗೊಂಡಿತು.

FMN5 FMN4 FMN3

ಸಾಂಪ್ರದಾಯಿಕ ಕಾರ್ಯದ ನಂತರ, ಪ್ರಸೂತಿ ಮತ್ತು ಸ್ತ್ರೀ ರೋಗ ಶುಶ್ರೂಷ ವಿಭಾಗವು, ಸಿ ಪಿ ಆರ್, ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯ ನಿರ್ವಹಣೆ ಮತ್ತು ಸ್ತನ ಸ್ವಯಂ ಪರೀಕ್ಷೆಗಳ ಕುರಿತು ಪ್ತಾಯೋಗಿಕ ಅವಧಿಯನ್ನು ನಡೆಸಿಕೊಟ್ಟರು. ಹೆಚ್ಚುವರಿಯಾಗಿ ಸಂಸ್ಥೆಯ ಆವರಣದ ಪ್ರವಾಸದ ಸಮಯ, ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು. ದಕ್ಷಿಣ ಕನ್ನಡದಿಂದ ಒಟ್ಟಾಗಿ 66 ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಧ್ಯಾಹ್ನದ 1:30 ಘಂಟೆಗೆ ಮುಕ್ತಾಯಗೊಂಡಿತು.

FMN24 FMN23

ಈ ದಿನದ ಆಚರಣೆಯು ಸೂಲಗಿತ್ತಿಯರ ಮತ್ತು ಆಶಾ ಕಾರ್ಯಕರ್ತೆಯರ ನಿರ್ಣಾಯಕ ಕೆಲಸವನ್ನು ಗುರುತಿಸಿತಲ್ಲದೆ, ಮೌಲ್ಯಯುತವಾದ ತರಬೇತಿ ಮತ್ತು ಒಳನೋಟವನ್ನು ಸಹ ಒದಗಿಸಿ, ಈ ವೃತ್ತಿಪರರು ಆರೋಗ್ಯ ವ್ಯವಸ್ಥೆಯಲ್ಲಿ ವಹಿಸುವ ಪ್ರಮುಖ ಪಾತ್ರವನ್ನು ಬಲಪಡಿಸಿತು.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.