spot_imgspot_img
spot_img

ಫಾದರ್ ಮುಲ್ಲರ್ ಅಸ್ಪತ್ರೆ,ತುಂಬೆ –   ಎನ್‌ಎ‌ಬಿಎಚ್ ಮಾನ್ಯತೆ

ಬಂಟ್ವಾಳ ತಾಲೂಕಿನ ತುಂಬೆಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಯು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಹಾಸ್ಪಿಟಲ್ಸ್ ಮತ್ತು ಹೆಲ್ತ್ ಕೇರ್ ಪ್ರೊವೈಡರ್ಸ್ (ಎನ್‌ಎ‌ಬಿ‌ಎಚ್) ರಾಷ್ಟ್ರ‍ೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಬಂಟ್ವಾಳ ತಾಲೂಕಿನಲ್ಲಿ ಈ ಗೌರವಾವಿತ ಮನ್ನಣೆ ಪಡೆದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಪಾತ್ರವಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

FMHT

ಆರೋಗ್ಯ ಸೇವೆಯ ಶ್ರೇಷ್ಠತೆ ಮತ್ತು ರೋಗಿಗಳ ಸುರಕ್ಷತೆ ಮತ್ತು ಗುಣಮಟ್ಟದ ಸೇವೆಯ ಅಚಲವಾದ ಬದ್ದತೆಗೆ ಮೀಸಲಾಗಿರುವ ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆ, ನಿರಂತರವಾಗಿ ವಿಕಸನಗೊಳ್ಳುತ್ತಿರುವ ಆರೋಗ್ಯ ರಕ್ಷಣೆಯ ಭೂಪಟದಲ್ಲಿ ತನ್ನದೇ ಮಾನದಂಡವನ್ನು ಸ್ಥಾಪಿಸಿದೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕವಾಗಿ 2013 ರಲ್ಲಿ ಸ್ಥಾಪನೆಯಾದ ಆಸ್ಪತ್ರೆಯು 100 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದ್ದು – ಬಂಟ್ವಾಳ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳ ಗ್ರಾಮೀಣ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿದೆ.

24/7 ಅಪಘಾತ ಸೇವೆಗಳು, ಆಪರೇಷನ್ ಥಿಯೇಟರ್‌ಗಳು, ಡಯಾಲಿಸಿಸ್ ಮತ್ತು ಫಾರ್ಮಸಿ ಇವೇ ಮುಂತಾದ ಅತ್ಯಾಧುನಿಕ ಸೌಲಭ್ಯಗಳ ಜೊತೆಗೆ ತುಂಬೆ ಫಾದರ್ ಮುಲ್ಲರ್ ಅಸ್ಪತ್ರೆ ನುರಿತ ತಜ್ಞ ವೈದ್ಯರು, ದಾದಿಯರು ಮತ್ತು ಸಹಾಯಕ ಸಿಬ್ಬಂದಿಯ ಆರೋಗ್ಯ ವೃತ್ತಿಪರರ ಅತ್ಯಂತ ಸಮರ್ಪಿತ ತಂಡವನ್ನು ಹೊಂದಿದೆ.

ಪ್ರಸ್ತುತ ಎನ್‌ಎ‌ಬಿಎಚ್ ರಾಷ್ಟ್ರ‍ೀಯ ಮಾನ್ಯತೆಯೊಂದಿಗೆ ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆ ತನ್ನ ಸ್ಥಾಪಕರಾದ ವಂ. ಫಾದರ್ ಆಗಸ್ಟಸ್ ಮುಲ್ಲರ್ ಅವರ ‘ಗುಣ ಗೊಳಿಸು  ಮತ್ತು ಸಾಂತ್ವನ ಗೊಳಿಸು ‘ ಎಂಬ ಧ್ಯೇಯವಾಕ್ಯವನ್ನು ಪ್ರತಿಧ್ವನಿಸುತ್ತಾ ಅಪ್ರತಿಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುವ ಬದ್ದತೆಯನ್ನು ಪುನರುಚ್ಚರಿಸುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.