ಸಂತ ಆಂತೊನಿ ಆಶ್ರಮ, ಜೆಪ್ಪು ಇದರ ಪಾಲಕರಾದ ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬವು ಫೆಬ್ರವರಿ 8 ರಂದು ಮಂಗಳೂರು ಮಿಲಾಗ್ರಿಸ್ ದೇವಾಲಯದ ಮೈದಾನದಲ್ಲಿ ಸಾಯಂಕಾಲ 6.00 ಘಂಟೆಗೆ ಸಂಭ್ರಮದ ಬಲಿಪೂಜೆಯೊಂದಿಗೆ ಆಚರಿಸಲಾಗುವುದು. ‘ದೇವರು ಕೊಟ್ಟ ಉದಾರ ಕೊಡುಗೆಯನ್ನು ಪ್ರಕಟಿಸು’ ಹಬ್ಬದ ಸಂದೇಶವಾಗಿದ್ದು, ಹಬ್ಬದ ಮಹಾ ಪೂಜೆಯನ್ನು ನಿವೃತ್ತ ಧರ್ಮಾಧ್ಯಕ್ಷ ಡಾ| ಎಲೋಶಿಯಸ್ ಪಾವ್ಲ್ ಡಿಸೋಜರವರು ನಡೆಸಿಕೊಡುವರು. ಕುಲಶೇಖರ ಚರ್ಚಿನ ಧರ್ಮಗುರು ವಂ| ಕ್ಲಿಫರ್ಡ್ ಫೆರ್ನಾಂಡಿಸ್ ಪ್ರವಚನ ನೀಡಲಿರುವರು.



ಹಬ್ಬಕ್ಕೆ ಮಂಗಳೂರು ಕಥೊಲಿಕ್ ಧರ್ಮಕ್ಷೇತ್ರದ ಸುಮಾರು 2,500 ಸಾವಿರ ಜನರು ಭಾಗವಹಿಸುವ ನಿರೀಕ್ಶೆಯಿದ್ದು, ಆ ದಿನ ಬೆಳಗ್ಗೆ 6.00 ಘಂಟೆಗೆ ಜೆಪ್ಪು ಸಂತ ಆಂತೊನಿ ಆಶ್ರಮದಲ್ಲಿ ಮಂಗಳೂರು ಧರ್ಮಾಧ್ಯಕ್ಷರ ಕಾರ್ಯದರ್ಶಿ ವಂ. ತ್ರಿಶಾನ್ ಡಿ’ಸೋಜ, ಕಾರ‍್ಯದರ್ಶಿ ಮಂಗಳೂರು ಧರ್ಮಾಧ್ಯಕ್ಷ, ಹಾಗೂ ಬೆಳಗ್ಗೆ 9.30 ಕ್ಕೆ ಪೆರ್ಮನ್ನೂರು ಚರ್ಚಿನ ಧರ್ಮಗುರುಗಳಾದ ಅತೀ ವಂದನಿಯ ಸಿಪ್ರಿಯನ್ ಪಿಂಟೊರವರು ಬಲಿಪೂಜೆಯನ್ನು ಅರ್ಪಿಸುವರು.

ಸಾಯಂಕಾಲ 4.45 ಕ್ಕೆ ಮಿಲಾಗ್ರಿಸ್ ಚರ್ಚಿನಲ್ಲಿ ಮಲಯಾಳಂನಲ್ಲಿ ವಂ| ಗುರು ಎಬಿನ್‌ರವರು ಬಲಿಪೂಜೆ ಆರ್ಪಿಸುವರು ಎಂದು ಆಶ್ರಮದ ಆಡಳಿತ ಮಂಡಳಿ ತಿಳಿಸಿದ್ದು, ಭಕ್ತಾಧಿಗಳಿಗೆ ಸ್ವಾಗತ ಕೋರಿದ್ದಾರೆ.




