spot_imgspot_img
spot_img

ಸಂತ ಅಂತೋಣಿಯವರ ಪವಿತ್ರ ಅವಶೇಷದ ವಾರ್ಷಿಕ ಮಹೋತ್ಸವಕ್ಕೆ ಚಾಲನೆ

ಮಂಗಳೂರು, ಜ.30: ಜೆಪ್ಪು ಸಂತ ಅಂತೋನಿ ಆಶ್ರಮವು ಪದುವಾ ಸಂತ ಅಂತೋನಿಯವರ ಪವಿತ್ರ ಅವಶೇಷದ ವಾರ್ಷಿಕ ಮಹೋತ್ಸವಕ್ಕೆ ಸಜ್ಜಾಗಿದ್ದು, ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠಗುರು ವಂ| ಮ್ಯಾಕ್ಸಿಮ್ ನೊರೊನ್ಹಾ ಮಿಲಾಗ್ರಿಸ್ ಚರ್ಚ್‌ನಲ್ಲಿ ನೊವೆನಾದ ಮೊದಲ ದಿನದಂದು ಹಬ್ಬದ ಧ್ವಜಾರೋಹಣ ಮಾಡುವ ಮೂಲಕ ಸಂಭ್ರಮದ ಮಹೋತ್ಸವಕ್ಕೆ ಚಾಲನೆ ನೀಡಿದರು.

StA7

StA5

StA6

ಜೆಪ್ಪುವಿನ ಸಂತ ಆಂತೋಣಿ ಸೆವಾ ಸಂಸ್ಥೆಗಳ ನಿರ್ದೇಶಕ ವಂದನೀಯ ಜೆ.ಬಿ ಕ್ರಾಸ್ತಾ, ಆತ್ಮಿಕ ನಿರ್ದೇಶಕರಾದ ವಂದನೀಯ ಗಿಲ್ಬರ್ಟ್ ಡಿಸೋಜಾ ಮತ್ತು ಸಹಾಯಕ ನಿರ್ದೇಶಕರಾದ ವಂದನೀಯ ಅವಿನಾಶ್ ಪಾಯ್ಸ್ ಜೊತೆಗೆ ಶ್ರೇಷ್ಠಗುರು ವಂ| ಮ್ಯಾಕ್ಸಿಮ್ ನೊರೊನ್ಹಾ ಅವರು ಉತ್ತಮ ಆಡಳಿತಕ್ಕಾಗಿ ಮತ್ತು ನಮ್ಮ ರಾಷ್ಟ್ರದ ಆಡಳಿತದಲ್ಲಿರುವವರಿಗಾಗಿ ನೊವೆನಾ ಪೂಜಾ ಸಮಯದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು.

StA13 StA12

ಶ್ರೇಷ್ಠಗುರು ವಂ| ಮ್ಯಾಕ್ಸಿಮ್ ನೊರೊನ್ಹಾ ಅವರು ತಮ್ಮ ಪ್ರವಚನದಲ್ಲಿ ಲೂಕನ ಗೃಂಥ 1:67 ಮತ್ತು 68, ಜಕರೀಯನು ಪವಿತ್ರಾತ್ಮ ಭರಿತನಾಗಿ ಪ್ರವಾದಿಸುತ್ತಾ, ಇಸ್ರಾಯೇಲಿನ ದೇವರಾದ ಕರ್ತನಿಗೆ ಸ್ತುತಿ ಆಗಲಿ ಎಂಬ ಪವಿತ್ರ ವಾಕ್ಯಗಳನ್ನು ಆಧರಿಸಿ ಧರ್ಮೋಪದೇಶವನ್ನು ಬೋಧಿಸಿದರು. ಹಬ್ಬದ ಪ್ರಯುಕ್ತ ನೊವೆನಾ ಪ್ರಾರ್ಥನಾ ವಿಧಿಗಳು 2024 ರ ಫೆಬ್ರವರಿ 7 ರವರೆಗೆ ನಡೆಯಲಿರುವುದು. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.

StA18

StA17

StA10

StA11

StA16

StA15

StA14

StA21

StA20

StA19

StA9

StA8

StA4

StA3

StA2

StA1

StA0

ಫೆಬ್ರುವರಿ 8, 2024 ರಂದು ಮಿಲಾಗ್ರಿಸ್ ಚರ್ಚ್ ಮೈದಾನದಲ್ಲಿ ಸಂಜೆ 6 ಗಂಟೆಗೆ ನಡೆಯುವ ಪ್ರಮುಖ ಹಬ್ಬದ ಪವಿತ್ರ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಅತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೊಜಾ ರವರು ನಡೆಸುವರು. “ಪಡೆದವರೆಲ್ಲಾ ಘೋಷಿಸಲಿ” ಹಬ್ಬದ ಸಂದೇಶವಾಗಿರುತ್ತದೆ.

ಫೆಬ್ರುವರಿ 8 ರಂದು ಹಬ್ಬದ ದಿನದಂದು ಕೊಂಕಣಿಯಲ್ಲಿ ಬಲಿಪೂಜೆ ಬೆಳಿಗ್ಗೆ 6 ಮತ್ತು 9.30 ಕ್ಕೆ ಜೆಪ್ಪು ಸಂತ ಅಂತೋನಿ ಆಶ್ರಮದಲ್ಲಿ ಮತ್ತು ಮಲಯಾಳಂನಲ್ಲಿ ಬಲಿಪೂಜೆ ಸಂಜೆ 4.30 ಕ್ಕೆ ಮಿಲಾಗ್ರಿಸ್ ಚರ್ಚ್‌ನಲ್ಲಿ ಆಚರಿಸಲಾಗುವುದು.

ವರದಿ/ ಚಿತ್ರ: ಕೆನರಾ ಕಮ್ಯುನಿಕೇಶನ್ ಸೆಂಟರ್

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.