spot_imgspot_img
spot_img

ಸ೦ತ ಅಲೋಶಿಯಸ್‌ ಸ್ವಾಯತ್ತ ಕಾಲೇಜ್ ಈಗ ಪರಿಗಣಿತ ವಿಶ್ವವಿದ್ಯಾನಿಲಯ

ಮಂಗಳೂರಿನ ಪ್ರಸಿದ್ದ ಸ೦ತ ಅಲೋಶಿಯಸ್‌ ಕಾಲೇಜಿನ (ಸ್ವಾಯತ್ತ) ವಿಶ್ವವಿದ್ಯಾನಿಲಯದ ಸ್ಥಾನಮಾನದ ಪ್ರಸ್ತಾವನೆಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಅನುಮೋದಿಸಿದ್ದು, ದಿನಾಂಕ 19.012024 ರಂದು, ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದ ಅಧಿಸೂಚನೆ ಸಂಖ್ಯೆ 9-27/2017-0,3 (1) ಪ್ರಕಾರ ಪರಿಗಣಿತ ವಿಶ್ವವಿದ್ಯಾನಿಲಯವೆಂದು ಘೋಷಿಸಿದೆ. ಈ ಸ್ಥಾನಮಾನದೊಂದಿಗೆ ಸಂಸ್ಥೆಯು ಇನ್ನು ಮುಂದೆ ಸ೦ತ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾನಿಲಯ ಎಂದು ಕರೆಯಲ್ಪಡುತ್ತದೆ. ಗುಣ ಮಟ್ಟದ ಉನ್ನತ ಶಿಕ್ಷಣವನ್ನು ನೀಡಿ ಶೈಕ್ಷಣಿಕ ಸೇವೆ ಸಲ್ಲಿಸಬೇಕೆಂದು ಬಹುದಿನಗಳಿ೦ದ ಅವಕಾಶದ ನಿರೀಕ್ಷೆಯಲ್ಲಿದ್ದ ಕಾಲೇಜಿನ ಆಡಳಿತ ಮಂಡಳಿಗೆ ಈ ಸ್ಥಾನಮಾನವು ವಿಶೇಷ ಸಂತಸವನ್ನು ತಂದಿದೆ” ಎಂದು ಮಂಗಳೂರು ಜೆಸ್ಯೂಟ್‌ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ| ಮೆಲ್ವಿನ್ ಜೆ. ಪಿಂಟೊ, ಎಸ್‌.ಜೆ. ಹರ್ಷ ವ್ಯಕ್ತಪಡಿಸಿದರು. ವಂ| ಪಿಂಟೊ ಸಂತ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

SA03

2017 ರಲ್ಲಿ ಪರಿಗಣಿತ ವಿಶ್ವವಿದ್ಯಾಲಯ ಪ್ರಕ್ರಿಯೆಯನ್ನು ಅರಂಭಿಸಿ, ಕೋವಿಡ್ ಮಹಾಮಾರಿಯ ನಡುವೆಯೂ ಛಲ ಬಿಡದೇ ಬೆನ್ನತ್ತಿ, ಪರಿಗಣಿತ ವಿಶ್ವವಿದ್ಯಾಲಯದ ಕನಸು ಸಾಕಾರಗೊಳಿಸಿದ ಕಾಲೇಜಿನ ಪ್ರಾಂಶುಪಾಲ ವಂ। ಡಾ। ಪ್ರವೀಣ್‌ ಮಾರ್ಟಿಸ್‌ ಎಸ್‌.ಜೆ. ಮಾತನಾಡಿ “ಯುಜಿಸಿ ಮತ್ತು ಶಿಕ್ಷಣ ಸಚಿವಾಲಯವು, ಕಾಲೇಜಿನ ಭೌತಿಕ ಮತ್ತು ಡಿಜಿಟಲ್‌ ಮೂಲಸೌಕರ್ಯ, ಪಠ್ಯಕ್ರಮ ವಿನ್ಯಾಸ, ಸ೦ಶೋಧನೆ ಮತ್ತು ಆವಿಷ್ಕಾರ, ಪದವಿ ಫಲಿತಾ೦ಶಗಳು, ವಿದ್ಯಾರ್ಥಿಗಳ ಸಾಧನೆಯ ಮಟ್ಟಗಳು, ನೇಮಕಾತಿ, ಸಂಸ್ಥೆಯ ಕನಸು – ಧ್ಯೇಯ ಮತ್ತು ಸಮಾಜದ ಮೇಲೆ ಇವುಗಳು ಬೀರಿದ ಪರಿಣಾಮವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಈ ಸ್ಥಾನಮಾನವನ್ನು ನೀಡಿದೆ. ಈ ಎಲ್ಲ ಮಾನದ೦ಡಗಳ ಜೊತೆಗೆ ನ್ಯಾಕ್‌ ಮತ್ತು ನಿರ್ಫ್‌ ನಂತಹ ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ನೀಡಿರುವ ಶ್ರೇಯಾ೦ಕಗಳನ್ನು ಪರಿಗಣಿಸಿ ಸ೦ತ ಅಲೋಶಿಯಸ್‌ ಕಾಲೇಜಿಗೆ ಈ ಮಾನ್ಯತೆಯನ್ನು ನೀಡಿದೆ. ಕಾಲೇಜಿಗೆ ದೊರೆತ ಈ ಮಾನ್ಯತೆಯಿಂದಾಗಿ ಸಂಸ್ಥೆಯು ಜಾಗತಿಕವಾಗಿ ಸ್ಪರ್ಧಾತ್ಮಕ ಪಠ್ಯಕ್ರಮ, ಉನ್ನತ-ಮಟ್ಟದ ಸ೦ಶೋಧನೆ, ಆವಿಷ್ಕಾರಗಳು ಮತ್ತು ಉದ್ಯಮಶೀಲತಾ ಪ್ರತಿನಿಧೀಕರಣ ಮೊದಲಾದುವುಗಳನ್ನು ದಕ್ಷವಾಗಿ ನಡೆಸುವುದಕ್ಕೆ ಮತ್ತು ರಚನಾತ್ಮಕ ವಾತಾವರಣವನ್ನು ನಿರ್ಮಿಸುವುದಕ್ಕೆ ಶಕ್ತವಾಗುವುದು. ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಪಾಲುದಾರರೊಂದಿಗೆ ಗಟ್ಟಿಯಾದ ಸಹಯೋಗದ ಸಾಧ್ಯತೆಗಳನ್ನು ಹುಡುಕಲು ಇದು ದೊಡ್ಡಮಟ್ಟದಲ್ಲಿ ಅವಕಾಶಗಳನ್ನು ಒದಗಿಸುತ್ತದೆ.” ಎಂದರು.

SA02

“ಸಂತ ಅಲೋಶಿಯಸ್ ಸಂಸ್ಥೆಯಲ್ಲಿ ಶಿಕ್ಷಣ ಪಡೆದುಕೊಂಡವರು ರಾಷ್ಟ್ರ‍ೀಯ, ಅಂತರಾಷ್ಟ್ರ‍ೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದು, ಜಿಲ್ಲೆಯಲ್ಲಿ ಕೆಲವೊಂದು ಪರಿಗಣಿತ ವಿಶ್ವವಿದ್ಯಾಲಯಗಳ ಮುಖ್ಯಸ್ಥರೂ ಆಗಿದ್ದಾರೆ. ಪ್ರಕ್ರಿಯೆಯ ಅವಧಿಯಲ್ಲಿ ನಮ್ಮ ಹಳೆವಿದ್ಯಾರ್ಥಿಗಳಿಂದ ನಮಗೆ ಸ ಹಕಾರ ದೊರಕಿದೆ. ಸಂತ ಅಲೋಶಿಯಸ್ ಕಾಲೇಜಿನಲ್ಲಿ 40 % ದಷ್ಟು ವಿದ್ಯಾರ್ಥಿಗಳು ಪ್ರಥಮ ಬಾರಿ ಉನ್ನತ ಶಿಕ್ಷಣ ಪಡೆಯುವ ವರ್ಗಕ್ಕೆ ಸೇರಿದವರಾಗಿದ್ದು, ಶಿಕ್ಷಣವನ್ನು ಜೆಸ್ಯೂಟ್‌ ಶಿಕ್ಷಣ ಸಂಸ್ಥೆಗಳು ಸೇವಾಕಯಕ ಎಂದು ಪರಿಗಣಿಸಿವೆ. ಸಂಸ್ಥೆ ಪರಿಗಣಿತ ವಿಶ್ವವಿದ್ಯಾಲಯವಾದ ಮೇಲೂ ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗದ ಹಾಗೆ ಕಾಳಜಿ ವಹಿಸುವುದು”  ಎಂದರು.

SA04

ಸಂಶೋಧನೆಯಿಂದ ಮಾತ್ರ ಜ್ಞಾನ ವರ್ಧನೆ ಸಾಧ್ಯ. ಆದುರದಿಂದ ಸಂಶೋಧನೆಗೆ ಒತ್ತು ನೀಡುವುದು, ಅದರಲ್ಲೂ ಮುಖ್ಯವಾಗಿ ಸ್ಥಳೀಯ ವಿಷಯಗಳಲ್ಲಿ ಸಂಶೋಧನೆಗೆ ಆದ್ಯತೆ ನೀಡುವುದು ನಮ್ಮ ಗುರಿಯಾಗಿದೆ ಎಂದು ವಂ| ಡಾ| ಪ್ರವೀಣ್ ಮಾರ್ಟಿಸ್ ಈ ಸಂದರ್ಭದಲ್ಲಿ ನುಡಿದರು.

SA01

ಮುಂದುವರಿದು ವಂ| ಡಾ| ಮಾರ್ಟಿಸ್ “1880 ರಲ್ಲಿ ಜೆಸ್ಯೂಟ್‌ ಪಿತಾಮಹರಿ೦ದ ಸ್ಥಾಪಿತವಾದ ಸ೦ತ ಅಲೋಶಿಯಸ್‌ ಕಾಲೇಜು ಈ ಪ್ರದೇಶದ ಯುವಕರಲ್ಲಿ ಬದ್ಧತೆ, ಸಾಮರ್ಥ್ಯ, ಸಹಾನುಭೂತಿ ಮತ್ತು ಆತ್ಮಸಾಕ್ನಿಯನ್ನು ಹೊಂದಿರುವ ವ್ಯಕ್ತಿಗಳನ್ನಾಗಿ ರೂಪಿಸಿದೆ. ಜೊತೆಗೆ ಈ ಸ೦ಸ್ಥೆ ಹಲವಾರು ವಿಶಿಷ್ಟ ಸಾಧನೆಗಳನ್ನು ಹೊ೦ದಿರುವ ಈ ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒ೦ದಾಗಿದೆ. ಸ೦ಸ್ಥೆಯ ರಾಷ್ಟ್ರೀಯ ಮತ್ತು ಜಾಗತಿಕ ಸ್ಥಾನಮಾನವನ್ನು ಪರಿಗಣಿಸಿ 2007 ರಲ್ಲಿ ಅದಕ್ಕೆ ಸ್ವಾಯತ್ತತೆಯ ಸ್ಮಾನಮಾನ ನೀಡಲಾಯಿತು. ಇದಲ್ಲದೆ, ಸ೦ಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ನ್ಯಾಕ್‌ ಮಾನ್ಯತೆಗಳ ಎಲ್ಲಾ ನಾಲ್ಕು ಹ೦ತಗಳ ಮೌಲ್ಯಮಾಪನ ಕ್ರಮದಲ್ಲಿ ಉನ್ನತ ದರ್ಜೆಯ ಶ್ರೇಯಾ೦ಕವನ್ನು ನಿರ೦ತರವಾಗಿ ಪಡೆದುಕೊ೦ಡಿದೆ. ನಾಲ್ಕನೇ ಹ೦ತದ ಮೌಲ್ಯಮಾಪನದಲ್ಲಿ ಒಟ್ಟು ಅಂಕ 4ರಲ್ಲಿ 3.67 ಸಿಜಿಪಿಎ ಯೊಂದಿಗೆ ಎ ಪ್ಲಸ್‌ ಪ್ಲಸ್‌ ದರ್ಜೆಯನ್ನು ಪಡೆದಿದೆ. ವಿರ್ಭ್‌ ಶ್ರೇಯಾಂಕದಲ್ಲಿ ಸತತ 3 ಅವಧಿಗೆ ಉನ್ನತ 100 ಕಾಲೇಜುಗಳಲ್ಲಿ ಒಂದಾಗಿದೆ. ಕಾಲೇಜಿಗೆ ದೊರೆತ ಈ ವಿಶ್ವವಿದ್ಯಾನಿಲಯ ಸ್ಥಾನಮಾನವು ಕಾಲೇಜಿನ ಪ್ರಾಧ್ಯಾಪಕ ವೃಂದದವರ, ಬೋಧಕೇತರ ಸಿಬ್ಬಂದಿಗಳ, ವಿದ್ಯಾರ್ಥಿಗಳ, ಪೋಷಕರ ಮತ್ತು ಸಂಬಂಧ ಪಟ್ಟ ಎಲ್ಲರ ಸಮರ್ಪಣಾ ಮನೋಭಾವ ಮತ್ತು ದಣಿವರಿಯದ ಶ್ರಮದ ಫಲವಾಗಿದೆ. ಪರಿಗಣಿತ ವಿಶ್ವವಿದ್ಯಾನಿಲಯವಾಗಿ ಸ೦ತ ಆಲೋಶಿಯಸ್‌ ಶಿಕ್ಷಣ ಸ೦ಸ್ಥೆ ಹೊಸ ಕನಸುಗಳೊಂದಿಗೆ ತನ್ನ ಪಯಣವನ್ನು ಆರ೦ಬಿಸಲಿದೆ. ಕಾಲೇಜನ ಕನಸು ಕಾಣ್ಕೆಯಂತೆ ಯುವ ಜನತೆಯನ್ನು ಪರರಿಗಾಗಿ ರೂಪಿಸುವ ತನ್ನ ಪ್ರಯತ್ನವನ್ನು ವಿನೂತನ ಬಗೆಯಲ್ಲಿ ಮುಂದುವರಿಸಲಿದೆ. ಸ೦ಸ್ಕೆಯ ಈ ಹೊಸ ಸಾಧನೆಗೆ ಕಾರಣೀಕರ್ತರಾದ ಕಾಲೇಜಿನ ಗೌರವಾನ್ವಿತ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಹಾಯ ಸಹಕಾರವನ್ನು ಸಂಸ್ಥೆ ವಿಶೇಷವಾಗಿ ನೆನಪಿಸಿಕೊಳ್ಳುತ್ತದೆ. ಪರಿಗಣಿತ ವಿಶ್ವವಿದ್ಯಾನಿಲಯದ ಸ್ವರೂಪಕ್ಕೆ ಹೊ೦ದಿಕೊಳ್ಳುತ್ತಾ ಶೈಕ್ಷಣಿಕ ಸ೦ಸ್ಕೆಯ ಸಾಮಾಜಿಕ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಸಮಾಜ ಕಟ್ಟುವ ಸದುದ್ವೇಶದ ಕಾರ್ಯಗಳು ಇನ್ನಷ್ಟು ಉತ್ಸಾಹದಿಂದ ಮುಂದುವರಿಸಬೇಕೆಂದು ಸಂಸ್ಥೆ ಭಾವಿಸುತ್ತದೆ.” ಎಂದರು.

ರಿಜಿಸ್ಟ್ರ‍ಾರ್ ಡಾ| ಆಲ್ವಿನ್ ಡೆಸಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿಲ್ಪಾ ಡಿ’ಸೊಜಾ ಈ ಸಂದರ್ಭದಲ್ಲಿ ಹಾಜರಿದ್ದರು.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.