spot_imgspot_img
spot_img

ರೋಹನ್ ಕ್ರಿಯೇಟರ್ಸ್ ಮೀಟ್ 2024 – ಮಂಗಳೂರಿನ ಕಂಟೆಂಟ್ ರಚನಾಕಾರರ ಒಕ್ಕೂಟ

ಜನವರಿ 20ನೇ ತಾರೀಕಿನಂದು, ರೋಹನ್ ಕಾರ್ಪೊರೇಷನ್, ಮಂಗಳೂರಿನ ಸ್ಫೂರ್ತಿದಾಯಕ ಕಂಟೆಂಟ್ ರಚನಕಾರರನ್ನು ರೋಹನ್ ಕ್ರಿಯೇಟರ್ಸ್ ಮೀಟ್ 2024ರ ಸಲುವಾಗಿ ಒಂದೇ ಸೂರಿನಡಿ ಒಗ್ಗೂಡಿಸಿತು. ಎಜೆ ಬ್ರ್ಯಾಂಡ್ ಹೋಟೆಲ್‌ನಲ್ಲಿ 50ಕ್ಕೂ ಹೆಚ್ಚು ಉತ್ಸಾಹದಿಂದ ಕೂಡಿದ ಕಂಟೆಂಟ್ ರಚನಕಾರರು, ಬ್ಲಾಗರ್‌ಗಳು, ಛಾಯಾಗ್ರಾಹಕರು, ವಿಡಿಯೋಗ್ರಾಹಕರು, ಸಂಗೀತಕಾರರು ಮತ್ತು ಇತರರು ನೆಟ್‌ವರ್ಕ್, ಪರಿಣತಿ ಮತ್ತು ಸೃಜನಶೀಲತೆಯನ್ನು ಉಜ್ಜಿವಿಸಲು ಒಂದೇ ಸೂರಿನಡಿ ಸೇರಿದ್ದರು.

RC01 RC02 RC03 RC04 RC05 RC06

ಶರಣ್ ಚಿಲಿಂಬಿ, ಪ್ರಜ್ವಲ್ ಶೆಟ್ಟಿ, ಮೋಕ್ಷಿತ್ ಪೂಜಾರಿ, ಸಾಹಿಲ್ ರೈ, ಹೇರಾ ಪಿಂಟೊ, ಮಂಗಳೂರು ಮೇರಿ ಜಾನ್, ಸೌಜನ್ಯಾ ಹೆಗ್ಡೆ ಮತ್ತು ಸಾಮಾಜಿಕ ಮಾಧ್ಯಮದ ಭೂಪಟಲದಲ್ಲಿನ ಇತರ ಹಲವಾರು ಪ್ರಮುಖ ವ್ಯಕ್ತಿಗಳ ಭಾಗವಹಿಸುವಿಕೆಯು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮೌಲ್ಯವನ್ನು ನೀಡಿತು.

ಇಂದಿನ ಕ್ರಿಯೇಟಿವ್ ಕಂಟೆಂಟ್ ತಯಾರಕರು ಧಾರಣೆಗಳನ್ನು ರೂಪಿಸುವ ಮತ್ತು ಮಂಗಳೂರನ್ನು ಒಂದು ಯಶಸ್ವಿ ಬ್ರ್ಯಾಂಡ್ ಎಂದು ಉತ್ತೇಜಿಸುವಲ್ಲಿ ಗಮನಾರ್ಹವಾದ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಂಗಳೂರು ಪ್ರದೇಶದ ದೃಷ್ಟಿಕೋನದೊಂದಿಗೆ ಹೊಂದಿಕೊಳ್ಳುವ ಯಾವುದೇ ಭರವಸೆಯ ಕಲ್ಪನೆಗಳಿಗೆ ರೋಹನ್ ಕಾರ್ಪೊರೇಷನ್ ಸಹಕರಿಸಲು ಮತ್ತು ಬೆಂಬಲಿಸಲು ಉತ್ಸುಕವಾಗಿದೆ ಎಂದು ರೋಹನ್ ಕಾರ್ಪೋರೇಷನ್‌ನ ವ್ಯವಸ್ಥಾಪಕ ನಿರ್ದೇಶಕರಾದ ರೋಹನ್ ಮೊಂತೇರೊ ಹೇಳಿದರು.

ಚರ್ಚೆಗಳು, ಆಕರ್ಷಕ ಚಟುವಟಿಕೆಗಳು ಮತ್ತು ಮೌಲ್ಯಯುತ ನೆಟ್‌ವರ್ಕಿಂಗ್ ಅವಕಾಶಗಳ ಈ ಕಾರ್ಯಕ್ರಮವು ರಚನಕಾರರು ಮತ್ತು ಭಾಗವಹಿಸುವವರ ಮೆಚ್ಚುಗೆಯನ್ನು ಪಡೆಯಿತು. ರೋಹನ್ ಕ್ರಿಯೇಟರ್ಸ್ ಮೀಟ್ 2024 – ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಕಾರ್ಪೊರೇಟ್ ಘಟಕಗಳ ನಡುವಿನ ಸಹಕಾರಕ್ಕೆ ಅವಕಾಶವನ್ನು ಒದಗಿಸಿತು ಹಾಗೂ ಮಂಗಳೂರನ್ನು ವಿಶಿಷ್ಟವಾದ ಬ್ರ‍್ಯಾಂಡ್ ಎಂದು ಉತ್ತೇಜಿಸುವ ಸೃಜನಶೀಲ ವಾತಾವರಣವನ್ನು ಬೆಳೆಸಿತು.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.