spot_imgspot_img
spot_img

ಸರ್ವ ಧರ್ಮ ಸಂಗಮ ವಸತಿ ಕೇಂದ್ರದಲ್ಲಿ ಕ್ರಿಸ್ಮಸ್ ಆಚರಣೆ

“ಅದೆಷ್ಟೋ ರೀತಿಯಲ್ಲಿ ಕ್ರಿಶ್ಚಿಯನ್ ಮತ್ತು ಹಿಂದು ಬಾಂಧವರಲ್ಲಿ ಸಾಮಾಜಿಕ ಹಾಗೂ ಚಾರಿತ್ರಿಕ ಸಾಮರಸ್ಯವಿದೆಯೆಂಬ ವಿಶಯ ಬಹುಶ ತುಂಬಾ ಮಂದಿಗೆ ಗೊತ್ತಿಲ್ಲ. ಕ್ರಿಶ್ಚಿಯನ್ನರು ಪೂಜಿಸುವ ಯೇಸುಕ್ರಿಸ್ತರು ಹಾಗೂ ಹಿಂದುಗಳಿಂದ ಪೂಜಿಸಲ್ಪಡುವ ಕ್ರಷ್ಣದೇವರ ಜನನ ಸಾಧಾರಣ ಒಂದೇ ಸ್ಥಿತಿಯಲ್ಲಿ ಜರಗಿತು. ಇಜ್ರಾಯಲಿನ ಬೆತ್ಲೆಹೆಮ್ ನಲ್ಲಿ ಯೇಸುಕ್ರಿಸ್ತರು ಒಂದು ಬಡ ಗೋದಲಿಯಲ್ಲಿ ಜನ್ಮತಾಳಿದರು. ಹಾಗೇಯೆ ನಮ್ಮ ಕ್ರಷ್ಣ ದೇವರು ಮಥುರಾದಲ್ಲಿನ ಒಂದು ಗೋದುಲಿಯಲ್ಲಿ ಜನಿಸಿದರು. ಇಬ್ಬರ ಜನ್ಮ ಸ್ಥಾನ ವೂ ಇಂದು ಸಮಸ್ಯೆಗಳಿಗೆ ಈಡಾಗಿದೆ. ಕ್ರಿಸ್ತ ಜನಿಸಿದ ಜೆರುಸಲೆಮ್ ನಲ್ಲಿ ಇಂದು ಯುದ್ಧದ ಮೋಡಗಳು ಪಸರಿಸಿವೆ. ಹಾಗೇಯೆ ಕ್ರಷ್ಣ ಜನಿಸಿದ ಜನ್ಮ ಸ್ಥಾನದಲ್ಲಿ ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳ ನಂತರವೂ ಅವರಿಗೆ ಅರ್ಪಿಸಲ್ಪಟ್ಟಂತಹ ಒಂದು ದೇವಾಲಯದ ಸ್ಥಾಪನೆ ಆಗಲಿಲ್ಲ,” – ಉಳೆಪಾಡಿ ಶ್ರೀ ದುರ್ಗಾ ಪರಮೇಶ್ವರೀ ಮಹಮ್ಮಾಯಿ ದೇವಾಲಯದ ಆಡಳಿತ ಸಮಿತಿಯ ಮುಖ್ಯಸ್ಥರಾಗಿರುವ ಶ್ರೀ ಮೋಹನ್ ದಾಸ್ ಸುರತ್ಕಲ್, ಇವರು ದಶೆಂಬರ್ 30 ರಂದು ಇಯಾನ್ ಕೇರ್ಸ್ ಪೌಂಡೇಶನನಿನ “ಸರ್ವ ಧರ್ಮ ಸಂಗಮ ವಸತಿ ಕೇಂದ್ರ ದಲ್ಲಿ ಏರ್ಪಡಿಸಲಾದ ಕ್ರಿಸ್ ಮಸ್ ಸೌಹಾರ್ಧ ಔತಣ ಕೂಟದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ICF30

ಮುಂದುವರಿದು, ಅವರು ಹೇಳಿದರು – “ನನಗೆ ಕ್ರಿಶ್ಚಿಯನ್ನರ ಶಾಂತಿ ಭರಿತ ಹಾಗೂ ಸೇವೆಯ ಮನೋಭಾವದ ವರ್ತನೆಗಾಗಿ ಅವರ ಮೇಲೆ ಪ್ರೀತಿ ವಿಶ್ವಾಸ. ಜಗತ್ತಿನಲ್ಲೇ ಸೇವೆಯ ಮನೋಭಾವವನ್ನು ಸಾರಿರುವ ಮದರ್ ತೆರೇಜಾ ಕ್ರಿಶ್ಚಿಯನ್ನರು ಎಂದರೆ ಯಾರು ಅಂತ ಜಗತ್ತಿಗೇ ತೋರಿಸಿಕೊಟ್ಟಿರುತ್ತಾರೆ.”

“ನಾನು ಅದೆಷ್ಟೋ ಬಾರಿ ಬೈಬಲ್ ಮತ್ತು ಇತರ ಧರ್ಮಗಳ ಧರ್ಮಗ್ರಂಥಗಳನ್ನು ಓದಿದ್ದೇನೆ. ಬೈಬಲ್ ಮತ್ತು ಭಗವತ್ ಗೀತೆ ಎರಡೂ ’B’ ಎಂಬ ಅಕ್ಶರದಿಂದ ಕರೆಯಲ್ಪಡುತ್ತವೆ ಮಾತ್ರವಲ್ಲ ಅದೆರಡೂ ಗ್ರಂಥಗಳ ಸಾಮರಸ್ಯ ಒಂದೇ – “ಪರಸ್ಪರ ಪ್ರೀತಿ ಮಾಡು, ಯಾರನ್ನೂ ದ್ವೇಷಿಸಬೇಡ.”

ICF35

77 ವರ್ಷ ಆಚರಿಸಿರುವ ’ಯುಗಪುರುಷ’ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಭುವನಾಭಿರಾಮ ಉಡುಪರವರು ಮಾತನಾಡಿ ಹೇಳಿದರು – “ನಮ್ಮ ಪ್ರದೇಶದಲ್ಲಿ ಯಾವುದೇ ಧರ್ಮ ಜಾತಿಯ ಹೆಸರಿನಲ್ಲಿ ಪರಸ್ಪರ ಕಚ್ಚಾಟ – ಜಗ್ಗಾಟ ನಡೆಯುವುದಿಲ್ಲ ಎಂದು ಹೇಳಲು ನಾನು ಅಭಿಮಾನ ಪಡುತ್ತಿದ್ದೇನೆ. ಎಲ್ಲಾ ಜನ ಜಾತಿಯವರೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸ ಸಾಮರಸ್ಯವನ್ನು ನಾನು ಅದೆಷ್ಟೋ ವರ್ಷಗಳಿಂದ ಕಂಡಿದ್ದೇನೆ. ಕೆಲವು ಕಿಡಿಗೇಳಿಗಳು ನಮ್ಮ ಮಧ್ಯೆ ದ್ವೇಷದ ಕಿಡಿ ಕಾರಲು ಪ್ರಯತ್ನಿಸುತ್ತಿದ್ದಾರೆ. ಸಣ್ಣ ಪುಟ್ಟ ವಿಶಯಗಳನ್ನು ಹುಡುಕಿ ದೊಡ್ಡ ಗುಡ್ಡವನ್ನು ಸ್ರಷ್ಟಿ ಮಾಡುತ್ತಿದ್ದಾರೆ. ಆದರೂ ಅವರ ಅಂತಹ ಕೆಲಸ ಗಳ ಹಿಂದಿನ ಮರ್ಮವನ್ನು ಅರಿತ ಜನರು ಯಾರೂ ಅವರನ್ನು ನಂಬುವುದಿಲ್ಲ. ನಮ್ಮೆಲ್ಲಾ ಬಾಂದವರು ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಒಂದಾಗಿ ಆಚರಿಸುತ್ತಿದ್ದಾರೆ. ಅದು ಕ್ರಿಸ್ಮಸ್ ಆಗಿರಲಿ, ಈದ್ ಆಗಿರಲಿ, ಗಣೇಶೋತ್ಸವ ಆಗಿರಲಿ ಅಂತಹ ಕಾರ್ಯಕ್ರಮಗಳಲ್ಲಿ ಎಲ್ಲಾ ಜನಜಾತಿಗಳ ಜನರ ಸಹಕಾರ ಹಾಗೂ ಸಹಭಾಗಿತ್ವ ನಾನು ಕಂಡಿದ್ದೇನೆ. ನಾನು ಕ್ರಿಶ್ಚಿಯನ್ ಮತ್ತು ಮುಸ್ಲಿಮರ ಜೊತೆ ಹುಟ್ಟಿ ಬೆಳೆದವ, ಕಲಿತವ, ಧರ್ಮ- ಜಾತಿಗಳ ನಡುವಿನ ಸಾಮರಸ್ಯವನ್ನು ನೋಡಿ ತಿಳಿದವ. ಈ ಸಂಸ್ಥೆಯ ಹೇಮಾಚಾರ್ಯರಂತೂ ನನ್ನೊಂದಿಗೆ ಒಂದೇ ವಿಧ್ಯಾಸಂಸ್ಥೆಯಲ್ಲಿ ಕಲಿತವರು, ನನ್ನ ನೆಚ್ಚಿನ ಮಿತ್ರರು. ಸರ್ವ ಧರ್ಮ ಸಂಗಮ ಸಂಸ್ಥೆ ಮತ್ತು ಯುಗಪುರುಷ ಬೇರೆ ಬೇರೆಯಲ್ಲ ಅಂತ ನಾನು ಭಾವಿಸಿರುತ್ತೇನೆ, ಹಾಗಾಗಿ ಇಲ್ಲಿ ಜರಗುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ”

ICF32

ICF35

ICF33

ICF31

ಕಾರ್ಯಕ್ರಮದ ಇನ್ನೋರ್ವ ಅತಿಥಿ, ಶ್ರೀ ಕ್ಶೇತ್ರ ಧರ್ಮಸ್ಥಳ ಗ್ರಾಮ ಅಭಿವ್ರದ್ಧಿ ಕೇಂದ್ರದ ಕ್ರಶಿ ವಿಭಾಗದ ಮುಖ್ಯಸ್ಥ ಶ್ರೀ ರಾಮ ಕುಮಾರ ಮಾರ್ನಾಡ್ ಮಾತನಾಡಿ, ತನ್ನ ಸಂಸ್ಥೆಯು ಹೇಗೆ ಜಾತಿ ಧರ್ಮ ಭಾಶೆಗಳ ಗಡಿದಾಟಿ ಎಲ್ಲರ ಪ್ರಗತಿಯತ್ತ ಕೆಲಸ ಮಾಡುತ್ತಿದೆ, ಹೇಗೆ ಎಲ್ಲರನ್ನು ತನ್ನ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದೆ ಎಂಬ ಬಗ್ಗೆ ಮಾಹಿತಿ ನೀಡಿದರು. ಅದರಲ್ಲೂ ಮಾಧಕ ಧ್ರವ್ಯಗಳ ಸೇವನೆಗೆ ಒಳಗಾದ ಯುವಕ-ಯುವತಿಯರನ್ನು ರಕ್ಶಿಸಲು ಅದೆಷ್ಟೋ ಕೆಲಸ ಕಾರ್ಯಗಳನ್ನು ರಚಿಸುತ್ತಿದೆ, ಅದೆಷ್ಟೋ ಕಾರ್ಯಗಾರಗಳನ್ನು ನಡೆಸುತ್ತಿದೆ ಎಂಬ ಬಗ್ಗೆ ವಿವರವಾಗಿ ಹೇಳಿದರು. ’ಮಾಧಕ ವ್ಯಸನ’ ನಮ್ಮ ಸಮಾಜಕ್ಕೆ ಅಂಟಿದ ಮಹಾರೋಗ, ಈ ರೋಗದಲ್ಲಿ ನರಳುವವರನ್ನು ಹೊರ ತರುವಲ್ಲಿ ಎಲ್ಲರ ಸಹಕಾರ ಬೇಕಾಗಿದೆ.” ಎಂದು ಅವರು ಹೇಳಿದರು. ಮುಂದೆ ಮಾತಾಡಿ, “ನನ್ನ ಧರ್ಮಪತ್ನಿಯಾಗಿರುವ ದೀಪಿಕಾ ಅಂಚನ್’ ಈ ಸಂಸ್ಥೆಯಲ್ಲಿ ಮಾನಸಿಕ ರೋಗಗಳಿಗೆ ಬಲಿಯಾದ ಯುವಜನರಿಗೆ ಮಾರ್ಗಧರ್ಶನ ಕೊಡುವ ಕೆಲಸದಲ್ಲಿ ತೊಡಗಿದ್ದಾರೆ ಎಂಬ ಬಗ್ಗೆ ನನಗೆ ತುಂಬಾ ಅಭಿಮಾನವಿದೆ.” ಎಂದರು.

ICF34

ಸಂಸ್ಥೆಯ ಪ್ರಮುಖ ಪ್ರಭಾರಿಯಾಗಿರುವ ಶ್ರೀಮತಿ ದೀಪಿಕಾ ಅಂಚನ್ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಇಯಾನ್ ಕೇರ್ಸ್ ಪೌಂಡೇಶನಿನ ಸಂಯೋಜಕರಾಗಿರುವ ಹೇಮಾಚಾರ್ಯರವರು ಧನ್ಯವಾದಗಳನ್ನು ಅರ್ಪಿಸಿದರು. ಸಹ ಭೋಜನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.