spot_imgspot_img
spot_img

‘ಸ್ಪಂದನಾ ಟ್ರಸ್ಟ್’ 52 ನೇ ವಾರ್ಷಿಕೋತ್ಸವ ಆಚರಣೆ

ಸ್ಪಂದನಾ ಟ್ರಸ್ಟ್,  ಇನ್ಫೆಂಟ್ ಮೇರಿಸ್ ಕಾನ್ವೆಂಟ್,  ಜೆಪ್ಪು. ಇವರು ತಮ್ಮ ಸಂಸ್ಠೆಯ 52 ನೇ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿದರು.

SP6

SP8

SP5

ಭಗಿನಿ ಸಿಲ್ವಿಯಾ ಫ಼ೆರ್ನಾಂಡಿಸ್ ಇವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ನೆರೆದ ಸ್ವ-ಸಹಾಯ ಸಂಘದ ಮಹಿಳೆಯರನ್ನು ಹಾಗೂ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ – “ನೀವೆಲ್ಲ ಸದಾ ನಿಮ್ಮ ಮಕ್ಕಳ ಹಾಗೂ ನಿಮ್ಮ ಕುಟುಂಬದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಸಂಸ್ಥೆಯು ಸದಾ ನಿಮ್ಮ ಬಗ್ಗೆ, ನಿಮ್ಮ ಹಾಗೂ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಮಕ್ಕಳ ವಿದ್ಯಾಭ್ಯಾಸ, ಸರಕಾರದಿಂದ ಸಿಗುವ ಸೌಲಭ್ಯಗಳ ಲಭ್ಯತೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಿ ಅವುಗಳನ್ನು ನಿಮ್ಮದಾಗಿಸಲು ಶ್ರಮಿಸುತ್ತಾರೆ. ನೀವು ನಿಮ್ಮ ಕಾಲ ಮೇಲೆ ನಿಂತು ಸ್ವಾಲಂಬನೆ ಸಾಧಿಸುವುದೇ ಸಂಸ್ಥೆಯ ಉದ್ದೇಶ” ಎಂದರು.

SP4

SP3

SP2

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ। ಸಿಡ್ನಿ ಡಿ’ಸೋಜ, ಪ್ರೊಫ಼ೆಸರ್,  ಜನರಲ್ ಮೆಡಿಸಿನ್, ಯೆನೆಪೋಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ, ಇವರು ಕಾರ್ಯಕ್ರಮವನ್ನು ಉದ್ದೇಶಿಸಿ – ಸ್ಪಂದನ ಟ್ರಸ್ಟಿನ ಕೆಲಸ, ಕಾರ್ಯವೈಖರಿ ಹಾಗೂ ಅವರು ಪಡುವ ಶ್ರಮಕ್ಕೆ ದೇವರು 100 ಪಟ್ಟು ಆಶೀರ್ವದಿಸಲಿ ಎಂದು ಹಾರೈಸಿದರು.

SP7

SP10

SP11

SP9ವಂದನೀಯ ಗುರು ವಿನ್ಸೆಂಟ್ ಡಿ ಸೋಜ, ನಿರ್ದೇಶಕರು ಸಿ.ಒ.ಡಿ.ಪಿ, ಇವರು ನೆರೆದ ಸರ್ವರಿಗೂ ನಮ್ಮಲ್ಲಿ ತ್ಯಾಗ, ಪ್ರೀತಿ, ವಿಶ್ವಾಸ, ಶಾಂತಿ, ಸಹನೆ, ಕರುಣೆ, ಮಮತೆ ಇವೆಲ್ಲ ನಮ್ಮ ಜೀವನದಲ್ಲಿದ್ದು ಸನ್ಮಾರ್ಗದಲ್ಲಿ ನಡೆಯಲು ಪ್ರಯತ್ನಿಸೋಣ. ಬಾಲ ಯೇಸು ನಮ್ಮ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ನಮ್ಮನ್ನು ಹರಸಲಿ ಎಂದು ಹಾರೈಸಿದರು.

ಸ್ಪಂದನಾ ಟ್ರಸ್ಟಿನ ಆಡಳಿತಾಧಿಕಾರಿ ಭಗಿನಿ ಹೆಲೆನ್ ಫೆರ್ನಾಂಡಿಸ್ ರವರು ತಮ್ಮ ಕನ್ಯಾಜೀವನದ ಸ್ವರ್ಣ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಸನ್ಮಾನಿಸಿ ಗೌರವಿಸಿದರು.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.