spot_imgspot_img
spot_img

ಮಾರಿಮುತ್ತು ಮರಳಿ ಮನೆಗೆ

ಒಂದು ಹೃದಯಸ್ಪರ್ಶಿ ಘಟನೆಯಲ್ಲಿ, ಮಾರಿಮುತ್ತು ನೋವಿನ ಬೇರ್ಪಡಿಕೆಯ ನಂತರ ತನ್ನ ಕುಟುಂಬದೊಂದಿಗೆ ಸಂತೋಷದಿಂದ ಮತ್ತೆ ಸೇರಿದ್ದಾರೆ. ಈ ಮಹತ್ವದ ಸಂದರ್ಭವನ್ನು ಸ್ನೇಹಾಲಯದಲ್ಲಿ ಆಚರಿಸಲಾಯಿತು.

SH01

SH02

ಅಕ್ಟೋಬರ್ 14ರಂದು ಮಾರಿ ಮುತ್ತು ಎಂಬ ಸುಮಾರು 47 ವರ್ಷ ಪ್ರಾಯದ ಮಹಿಳೆಯನ್ನು ಕಾಸರಗೋಡಿನ ಪಿಂಕ್ ಪೋಲಿಸರು, ಕಾಸರಗೋಡು ಸರ್ಕಾರಿ ಬಸ್ಸು ನಿಲ್ದಾಣದ ಬಳಿಯಿಂದ ರಕ್ಷಿಸಿ, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು. ಅವರು ಮಾನಸಿಕ ಕಾಯಿಲೆಯಿಂದ ಬಳಲುತಿದ್ದು ಅತೀಯಾದ ಮಾತುಕತೆ ಮತ್ತು ಆಕ್ರಮಣಕಾರಿ ನಡುವಳಿಕೆಯಂತಹ ಸ್ವಭಾವವನ್ನು ಹೊಂದಿದ್ದಳು. ಸ್ನೇಹಾಲಯ ಸಿಬ್ಬಂದಿಯ ನಿರಂತರ ಬದ್ಧತೆ ಮತ್ತು ಸಮಾಲೋಚನೆಗಳಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯ ಪರಿಣಾಮವಾಗಿ ಮಾರಿಮುತ್ತು ಅವರ ಸ್ಥಿತಿಯು ಸ್ಥಿರವಾಗಿ ಸುಧಾರಿಸಿತು.  ಅಂತಿಮವಾಗಿ ತನ್ನ ಕುಟುಂಬದ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು. ಮಾರಿಮುತ್ತು ಅವರು ಈ ಹಿಂದೆ ವಿದೇಶದಲ್ಲಿ ಕೆಲಸ ಮಾಡಿದ್ದರು, ಆದರೆ ಕೆಲಸದ ನಿಮಿತ್ತ ಕಾಸರಗೋಡಿಗೆ ಆಗಮಿಸಿದ ಆಕೆಗೆ ವೈಯಕ್ತಿಕ ಸಮಸ್ಯೆಗಳು ಎದುರಾದವು, ಇದು ಆಕೆಯ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿತ್ತು. ಆಕೆಯ ಕುಟುಂಬದವರು ತಮಿಳುನಾಡಿನಿಂದ ಆಕೆಯನ್ನು ಪುನಃ ಮನೆಗೆ ಕರೆದೊಯ್ಯಲು ಸ್ನೇಹಾಲಯಕ್ಕೆ ಆಗಮಿಸಿದರು, ಹಾಗೂ ಸoತೊಷದಿoದ ಅವರನ್ನು ಮನೆಗೆ ಕರೆದುಕೋoಡು ಹೋದರು.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.