ದಕ್ಷಿಣ ಕನ್ನಡ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಗರದ ಪ್ರತಿಷ್ಠಿತ ಲೂರ್ಡ್ಸ್ ಸೆಂಟ್ರಲ್ ಶಾಲೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಇದೀಗ ಮತ್ತೊಂದು ಮಹತ್ತರವಾದ ಸಾಧನೆಗೆ ಮೈಲಿಗಲ್ಲು ಹಾಕಲು ಸಜ್ಜಾಗಿದೆ. ಶಾಲೆಯ 28 ವಿದ್ಯಾರ್ಥಿಗಳನ್ನು ಒಳಗೊಂಡ ತಂಡವು ಈಗ ಇಂಗ್ಲೆಂಡ್ ದೇಶದ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದು,ಇದೇ ಅಕ್ಟೋಬರ್ 15 ರಂದು ಪ್ರವಾಸಕ್ಕೆ ತೆರಳಿ ಅಕ್ಟೋಬರ್ 24ರಂದು ವಾಪಾಸಾಗಲಿರುವರು.

ಇಂಗ್ಲೆಂಡ್ ದೇಶವು ಕೇವಲ ತಂತ್ರಜ್ಞಾನ ಮಾತ್ರವಲ್ಲದೆ ರಾಜಕೀಯ, ಪುರಾತತ್ವ, ಅಟೋಟ ಮತ್ತು ಇನ್ನಿತರ ಸಾಮಾಜಿಕ ರಂಗದಲ್ಲಿ ಅಗಾಧವಾದ ಸಾಧನೆಯನ್ನು ಮಾಡಿದ್ದು, ಈ ಪ್ರವಾಸವು ಶಾಲಾ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣಕ್ಕೆ ಉತ್ತಮ ವೇದಿಕೆಯಾಗಲಿದ್ದು, ಈ ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿ ತಂಡವು ಇಂಗ್ಲೆಂಡ್ ದೇಶದ ಹೈಡ್ ಪಾರ್ಕ್, ದ ಬಿಗ್ ಬೆನ್, ವೆಸ್ಟ್ ಮಿನಿಸ್ಟರ್ ಅಬ್ಬೆ, ಹೌಸ್ ಆಫ್ ಪಾರ್ಲಿಮೆ೦ಟ್, ಟ್ರಪಲ್ ಗರ್ ಸ್ಕ್ವೇರ್, ಪಿಕ್ಕಡಿಲ್ಲಿ ಸರ್ಕಸ್, ಟವರ್ ಬ್ರಿಡ್ಜ್, ರಿವರ್ ಥೇಮ್ಸ್, ಬಕಿ೦ಗ್ ಹ್ಯಾಮ್ ಪ್ಯಾಲೆಸ್, ಬ್ರಿಟಿಷ್ ಮ್ಯುಸಿಯಮ್, ಮದಾಮೆ ತುಸಡ್ಸ್, ಲ೦ಡನ್ ಐ, ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯ೦, ಥೇಮ್ಸ್ ರಿವರ್ ಕ್ರೂಸ್ ರೈಡ್, ವಿಂಡ್ಸರ್ ಕ್ಯಾಸಲ್, ಸಾಲಿಸ್ ಬರ್, ಸ್ಟೋನ್ಹೇನ್ಜ್, ಆಕ್ಸ್ಪರ್ಡ್, ಸಿಟಿ ಟೂರ್ ಆಫ್ ಲಿವರ್ ಪೂಲ್, ಮು೦ತಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲಿದ್ದು,ಕೆಲವೊಂದು ಶೈಕ್ಷಣಿಕ ಸ್ಥಳಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದು ಮೂರನೇ ಅಂತಾರಾಷ್ಟ್ರೀಯ ಶೈಕ್ಷಣಿಕ ಪ್ರವಾಸವಾಗಿದ್ದು, ಈ ಹಿಂದೆ ನಾಸಾ – ಯು ಎಸ್ ಎ (2017), ಮತ್ತು ಜಪಾನ್ (2019) ಯಶಸ್ವಿಯಾಗಿ ನಿರ್ವಹಿಸಿ, ಇದೀಗ ಶಾಲಾ ಬೆಳ್ಳಿಹಬ್ಬದ ಸುಸಂದರ್ಭದಲ್ಲಿ ಮತ್ತೊಂದು ಸಾಧನೆ ಸಂಸ್ಥೆಯ ವಿಶೇಷತೆಯಾಗಿದೆ.
ಲೂರ್ಡ್ಸ್ ಸೆಂಟ್ರಲ್ ಶಾಲೆಯ ಪ್ರಾಂಶುಪಾಲ ವಂದನೀಯ ಫಾ| ರೋಬರ್ಟ್ ಡಿಸೋಜ ಇವರ ನೇತೃತ್ವದಲ್ಲಿ ಪ್ರಾಂಶುಪಾಲೆ ಬೆಲಿಟಾ ಮಸ್ಕರೇನಸ್ ಸಂಯೋಜಕರಾಗಿದ್ದು, ಮಂಗಳೂರಿನ ಟ್ರಾವೆಲ್ ಸ್ಪೇಸ್ ಪ್ರವಾಸಿ ಸ೦ಸ್ಥೆಯ ಪ್ರೀತಮ್ ನಾಮದೇವ್ ಮತ್ತು ನಯನ್ ಇವರ ಮಾರ್ಗದರ್ಶನ ದಲ್ಲಿ ಆಯೋಜಿಸಲಾಗಿದೆ. ಶೈಕ್ಷಣಿಕ ರಂಗದಲ್ಲಿ ಹೊಸ ಆಯಾಮ ಬರೆಯಲು ಈ ಪ್ರವಾಸವು ನಾಂದಿಯಾಗಲಿದೆ.




