ದಿನಾಂಕ 02.09.2023 ರಂದು ಸಂತ ರೇಮಂಡ್ ವಿದ್ಯಾಸಂಸ್ಥೆ ವಾಮಂಜೂರು ಇಲ್ಲಿ ಬೆಥನಿ ಎಜ್ಯುಕೇಶನಲ್ ಸೊಸೈಟಿಯ 75 ನೇ ಅಮೃತ ಮಹೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.


ಬೆಥನಿ ಎಜ್ಯುಕೇಶನಲ್ ಸೊಸೈಟಿಯ ಕಾರ್ಪೊರೇಟ್ ಮ್ಯಾನೇಜರ್ ವಂದನೀಯ ಭಗಿನಿ ಸಿಸಿಲಿಯ ಮೆಂಡೋನ್ಸಾ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದರು. ಧರ್ಮಗುರುಗಳಾದ ರೇವರೆಂಡ್ ಫಾದರ್ ಮ್ಯಾಕ್ಸಿಮ್ ಎಲ್ ನೊರೊನ್ಹಾ, ವಿಕಾರ್ ಜನರಲ್ ಮಂಗಳೂರು ಧರ್ಮಪ್ರಾಂತ್ಯ, ಬೆಥನಿ ಎಜ್ಯುಕೇಶನಲ್ ಸೊಸೈಟಿಯ 76 ನೇ ವರ್ಷದ ಸಂಭ್ರಮಕ್ಕೆ ಚಾಲನೆಯನ್ನು ನೀಡಿ ದೀಪ ಬೆಳಗಿಸಿ, ಆಶೀರ್ವಚನ ನೀಡಿದರು.


ಮುಖ್ಯ ಅತಿಥಿಯಾಗಿ ಶ್ರೀಯುತ ಜೇಮ್ಸ್ ಕುಟಿನ್ಹೊ, ಕ್ಷೇತ್ರ ಶಿಕ್ಷಣಾಧಿಕಾರಿ, ಮಂಗಳೂರು ಉತ್ತರ ವಲಯ, ಶ್ರೀಮತಿ ಮರಿಯಮ್ಮ ತೋಮಸ್, ಮಾಜಿ ಕಾರ್ಪೊರೇಟರ್ ಹಾಗೂ ವಕೀಲರು ಮತ್ತು ಡಾ| ಸತೀಶ್ ಕುಮಾರ್- ಮಣಿಪಾಲ ವಾಣಿಜ್ಯ ವಿಭಾಗದ ಹಿರಿಯ ಆಧ್ಯಾಪಕರು ಹಾಗೂ ಭಗಿನಿ ಶುಭ, ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ಹಾಗೂ ಸೈಂಟ್ ರೇಮಂಡ್ ಸಂಸ್ಥೆಗಳ ಸಂಚಾಲಕಿ ಮತ್ತು ಸ್ಥಳೀಯ ಕಾನ್ವೆಂಟಿನ ಸುಪೀರಿಯರ್ ವಂದನೀಯ ಭಗಿನಿ ವಿತಾಲಿಸ್ ಉಪಸ್ಥಿತರಿದ್ದರು.
ಡಾ| ಸತೀಶ್ ಕುಮಾರ್ ಹಾಗೂ ಶ್ರೀಮತಿ ಮರಿಯಮ್ಮ ತೋಮಸ್ ಇವರು ಬೆಥನಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾಗಿದ್ದು ತಮ್ಮ ಪ್ರಗತಿಗೆ ಕಾರಣಕರ್ತರಾದ ಬೆಥನಿ ಶಿಕ್ಷಣ ಸಂಸ್ಥೆಯನ್ನು ಶ್ಲಾಘಿಸಿದರು.
ವಂದನೀಯ ಭಗಿನಿ ಶುಭ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಶರ್ಮಿಳ ಹಾಗೂ ಶ್ರೀಮತಿ ರೇಶ್ಮ ವಂದಿಸಿದರು. ಭಗಿನಿ ಜೆಸ್ಸಿ ಪ್ರೀಮ ಮತ್ತು ಶ್ರೀಮತಿ ಡೆಲ್ಸಿ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.




