spot_imgspot_img
spot_img

ಕಥೋಲಿಕ್ ಶಿಕ್ಷಣ ಮಂಡಳಿಯಲ್ಲಿ ಶಿಕ್ಷಕರ ದಿನಾಚರಣೆ

ದಿನಾಂಕ 02.09.2023 ರಂದು ಕಥೋಲಿಕ್ ಶಿಕ್ಷಣ ಮಂಡಳಿ ಮಂಗಳೂರು ಇಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಶಿಕ್ಷಕರಿಗೆ ಸನ್ಮಾನ/ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಗರಿಷ್ಠ ಫಲಿತಾಂಶ ಪಡೆದ ಸಂಸ್ಥೆಗಳಿಗೆ ಪುರಸ್ಕರಿಸುವ ಕಾರ್ಯಕ್ರಮವನ್ನು ಆಯ್ದುಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹ ವಹಿಸಿದರು. ಪಾಲನಾ ಕೇಂದ್ರ ಬಜ್ಜೋಡಿ ನಿರ್ದೇಶಕರಾದ ವಂದನೀಯ ಸಂತೋಷ್ ರೊಡ್ರಿಗಸ್, ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಆಂಟನಿ ಶೆರಾ, ನಿಯೋಜಿತ ಕಾರ್ಯದರ್ಶಿ ವಂದನೀಯ ಪ್ರವೀಣ್ ಲಿಯೊ ಲಸ್ರಾದೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

CB01

ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ ಬೊಂದೆಲ್ ಇಲ್ಲಿನ ವಿದ್ಯಾರ್ಥಿಗಳು ತಮ್ಮ ಶುಶ್ರಾವ್ಯ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಥೋಲಿಕ್ ಶಿಕ್ಷಣ್ ಮಂಡಳಿಯ ಕಾರ್ಯದರ್ಶಿಯವರು ಎಲ್ಲರನ್ನೂ ಸ್ವಾಗತಿಸಿದರು. 2022 – 2023 ನೇ ಸಾಲಿನಲ್ಲಿ ನಮ್ಮನ್ನು ಅಗಲಿದ ಶಿಕ್ಷಕ- ಶಿಕ್ಷಕೇತರ ಹಾಗೂ ವಿದ್ಯಾರ್ಥಿಗಳಿಗೆ ಶೃದ್ಧಾಂಜಲಿಯನ್ನು ನಿಯೋಜಿತ ಕಾರ್ಯದರ್ಶಿ ವಂದನೀಯ ಪ್ರವೀಣ್ ಲಿಯೊ ಲಸ್ರಾದೊ ಅರ್ಪಿಸಿದರು. ಶೇಕಡಾ 100 ಫಲಿತಾಂಶ ಪಡೆದ ಶಿಕ್ಷಣ ಸಂಸ್ಥೆಗಳನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗೌರವಿಸಲಾಯಿತು.

ಹಲವು ವರ್ಷಗಳ ಕಾಲ ಕಥೋಲಿಕ್ ಶಿಕ್ಷಣ ಮಂಡಳಿಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ವಿದ್ಯಾದಾನ ಮಾಡಿ ಸೇವಾ ನಿವೃತ್ತಿ ಹೊಂದಿದ 60 ಮಂದಿ ಬೋಧಕ, ಬೋದಕೇತರ ಸಿಬ್ಬಂದಿ ವರ್ಗದವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ, ಫಲಪುಷ್ಪ ಅರ್ಪಿಸಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಸಂದೇಶದಲ್ಲಿ ನಿವೃತ್ತ ಶಿಕ್ಷಕರ ಸಮರ್ಪಿತ ಸೇವೆಯನ್ನು ಶ್ಲಾಘಿಸಿ, ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದರೊಂದಿಗೆ ಅವರ ನಿವೃತ್ತಿ ಜೀವನಕ್ಕೆ ಶುಭವನ್ನು ಹಾರೈಸಿದರು.

CB03

ಹಲವು ವರ್ಷಗಳ ಕಾಲ ಕಥೋಲಿಕ್ ಶಿಕ್ಷಣ ಮಂಡಳಿಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ವಿದ್ಯಾದಾನ ಮಾಡಿ ಸೇವಾ ನಿವೃತ್ತಿ ಹೊಂದಿದ 60 ಮಂದಿ ಬೋಧಕ, ಬೋದಕೇತರ ಸಿಬ್ಬಂದಿ ವರ್ಗದವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ, ಫಲಪುಷ್ಪ ಅರ್ಪಿಸಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಸಂದೇಶದಲ್ಲಿ ನಿವೃತ್ತ ಶಿಕ್ಷಕರ ಸಮರ್ಪಿತ ಸೇವೆಯನ್ನು ಶ್ಲಾಘಿಸಿ, ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದರೊಂದಿಗೆ ಅವರ ನಿವೃತ್ತಿ ಜೀವನಕ್ಕೆ ಶುಭವನ್ನು ಹಾರೈಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರ ಉಪಕಾರ ಸ್ಮರಣೆಯನ್ನು ಸಿಸ್ಟರ್ ಆಂಟನಿ ಮೇರಿ, ಮುಖ್ಯ ಶಿಕ್ಷಕಿ, ಸೈಂಟ್ ಬ್ರಿಜಿಟ್ ಹಿ.ಪ್ರಾ. ಶಾಲೆ, ಸುಳ್ಯ ಇವರು ಮಾಡಿದರು.

ನಿವೃತ್ತರ ಹೆಸರುಗಳನ್ನು ಶ್ರೀಮತಿ ಪೆಟ್ರಿಶಿಯಾ ಲೋಬೊ, ಮುಖ್ಯ ಶಿಕ್ಷಕಿ ಸೈಂಟ್ ಪೀಟರ್ ಹಿ.ಪ್ರಾ.ಶಾಲೆ, ಕೊಟ್ಟಾರ ಮತ್ತು ಶ್ರೀಮತಿ ಪ್ಲೋರಿನ್ ಪಿರೇರಾ ಮುಖ್ಯ ಶಿಕ್ಷಕಿ ಸೈಂಟ್ ಅಲೋಶಿಯಸ್ ಹಿ.ಪ್ರಾ.ಶಾಲೆ, ಉರ್ವಾ ವಾಚಿಸಿದರು.

ನಿವೃತ್ತರ ಪೈಕಿ ಶ್ರೀ ಅಲೋಶಿಯಸ್ ಡಿ’ಸೋಜ ನಿವೃತ್ತ ಮುಖ್ಯ ಶಿಕ್ಷಕರು ರೊಜಾರಿಯೊ ಪ್ರೌಢಶಾಲೆ, ಮಂಗಳೂರು, ಡಾ. ಪ್ರೆಸಿಲ್ಲ ಡಿಸೋಜ ನಿವೃತ್ತ ಮುಖ್ಯ ಶಿಕ್ಷಕಿ ಸೈಂಟ್ ಅಲೋಶಿಯಸ್ ಅಂಗ್ಲ ಮಾಧ್ಯಮ ಶಾಲೆ, ಉರ್ವಾ ಇವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಶ್ರೀಮತಿ ಪ್ರೀತಿ ಡಿಸೊಜ, ಶಿಕ್ಷಕಿ, ಕಾಸ್ಸಿಯಾ ಪ್ರೌಢಶಾಲೆ ಇವರು ನೆರವೇರಿಸಿದರು.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.