spot_imgspot_img
spot_img

14 ವರ್ಷಗಳ ಫಲದಾಯಕ ಸೇವೆಯನ್ನು ಸಂಭ್ರಮಿಸಿದ ಸ್ನೇಹಾಲಯ

2009 ರಲ್ಲಿ ಸಂತ ಮದರ್ ತೆರೇಸಾರವರ ಜನ್ಮದಿನದಂದು ನಿರಾಶ್ರಿತ ಮಾನಸಿಕ ಅಸ್ವಸ್ಥರ ಸೇವೆಗಾಗಿ ಪ್ರಾರಂಭಗೊಂಡ  ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ತನ್ನ 14 ನೇ ವಾರ್ಷಿಕೋತ್ಸವವನ್ನು ಆಚರಿಸಿತು.  ಸಮಾಜಕ್ಕೆ ಸಂಸ್ಥೆಯ ಅತ್ಯುತ್ತಮ ಕೊಡುಗೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳ ಜೊತೆಗೆ ಅನುಕಂಪ, ದಯೆ ಮತ್ತು ಸಹಾನುಭೂತಿಯ ತತ್ವಗಳ ಮೇಲೆ ಸ್ಥಾಪಿತವಾದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಬಡವರು ಮತ್ತು ನಿರ್ಗತಿಕರಿಗೆ ಭರವಸೆಯ ದಾರಿದೀಪವಾಗಿ ಹೊರಹೊಮ್ಮಿದೆ, ಕಳೆದ 14 ವರ್ಷಗಳಲ್ಲಿ ಅಸಂಖ್ಯಾತ ನೊಂದವರ ಜೀವನವನ್ನು ಬೆಳಗಿಸಿದೆ.

SN24

S05

S06 1

ಈ ಸಂಧರ್ಭದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಸಂತ ದೇವಸಹಾಯ ಪಿಳ್ಳೈ ಅವರ ಗ್ರೊಟ್ಟೊವನ್ನು ವರ್ಕಾಡಿ ದೇವಾಲಯದ ಪ್ರಧಾನ ಗುರುಗಳಾದ ವಂದನೀಯ ಫಾ। ಬಾಸಿಲ್ ವಾಸ್ ರವರು ತಮ್ಮ ಪುಣ್ಯ ಕರಗಳಿಂದ ಆಶೀರ್ವದಿಸಿ ಉದ್ಗಾಟಿಸಿದರು. ಈ ಸಂಧರ್ಬದಲ್ಲಿ  ಸಮುದಾಯದ ಪ್ರಮುಖ  ಮುಖಂಡರು, ಧರ್ಮಗುರುಗಳು, ಸಹೋದರ-ಸಹೋದರಿಯರು, ದಾನಿಗಳು ಹಾಗೂ ಸ್ನೇಹಾಲಯದ ಸಂಸ್ಥಾಪಕರು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.

S12 S11 S10 S09 S08 S07 1

ಅನಂತರ, ಕಳೆದ 14 ವರ್ಷಗಳಿಂದ ದೇವರು ಸುರಿಸಿದ ಕೃಪೆ ಮತ್ತು ಅನುಗ್ರಹಗಳಿಗಾಗಿ ಧನ್ಯವಾದಗಳನು ಅರ್ಪಿಸುತ್ತಾ  ದಿವ್ಯ ಬಲಿ ಪೂಜೆಯನ್ನು ಅರ್ಪಿಸಲಾಯಿತು. ಬಲಿಪೂಜೆಯ ಮುಖ್ಯ ಅರ್ಚಕರಾಗಿ ವಂದನೀಯ ಗುರುಗಳಾದ ಫಾ। ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಒಸಿಡಿ ಹಾಗೂ ಫಾ। ಬಾಸಿಲ್ ವಾಸ್,  ಫಾ। ಎಡ್ವಿನ್ ಪಿಂಟೊ ಮತ್ತು ಫಾ। ಸಿರಿಲ್ ಡಿ ಸೋಜಾ ರವರು ಸಹ ಅರ್ಚಕರಾಗಿ ಬಲಿಪೂಜೆಯಲ್ಲಿ ಭಾಗವಹಿಸಿದರು.

S04

S03 1

S02 1

S01 1

S13

ಪೂಜೆಯ  ನಂತರ, ಸ್ನೇಹಾಲಯದ ಸಂಸ್ಥಾಪಕರಾದ ಬ್ರ ಜೋಸೆಫ್ ಕ್ರಾಸ್ತಾ ಅವರು ಕೃತಜ್ಞತೆಯ ಸ್ಪರ್ಶವನ್ನು ವ್ಯಕ್ತಪಡಿಸಿದರು. ಈ ಸಂಸ್ಥೆಯ 14 ವರ್ಷಗಳ ಪಯಣವನ್ನು ಸುಗಮ ರೀತಿಯಲ್ಲಿ ಸಂಚಾಲನೆ ಮಾಡಿದ ಕಾರಣಕರ್ತ ದೇವರನ್ನು ಹಾಗೂ ಎಲ್ಲಾ ಹಿತೈಷಿ ಮಿತ್ರರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಅನಂತರ ಗೌರವಾನ್ವಿತ ಗುರುಗಳಿಗೆ ಸ್ಮರಣಿಕೆಗಳು ಮತ್ತು ಹೂಗುಚ್ಛಗಳನ್ನು ನೀಡಲಾಯಿತು.  ಈ ಕಾರ್ಯಕ್ರಮದ ಮುಖ್ಯ ಶೋಭೆಯಾಗಿ ಅವರು ಈ ವರ್ಷದ ಅತ್ಯುತ್ತಮ ಸಿಬ್ಬಂದಿ ಎಂದು ಗುರುತಿಸಲ್ಪಟ್ಟಿರುವ ಶ್ರೀ. ಮಾರ್ಕೊ ಸ್ಟಾನ್ಲಿ ಫೆರ್ನಾಂಡಿಸ್ ಅವರ ಅತ್ಯುತ್ತಮ ಪ್ರಯತ್ನಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಕೊನೆಗೆ ಈ ಕಾರ್ಯಕ್ರಮವು ಒಂದು ಸಹಭೋಜನದೊಂದಿಗೆ ಮುಕ್ತಾಯವಾಯಿತು.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.